dtvkannada

ಮಂಗಳೂರು: ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪಕ್ಷದ ಕಾರ್ಯಕ್ರಮವೊಂದಕ್ಕೆ ಮಂಗಳೂರು- ಬಿಸಿರೋಡ್ ರಸ್ತೆ ಮಾರ್ಗವಾಗಿ ತೆರಲುತ್ತಿದ್ದ ಸಂದರ್ಭ ಪರಂಗಿಪೇಟೆಯಲ್ಲಿ SDPI ಕಾರ್ಯಕರ್ತರು ಕಪ್ಪು ಬಾವಟ ಪ್ರದರ್ಶಿಸಿ ಮುತ್ತಿಗೆಗೆ ಯತ್ನಿಸಿದರು.

ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಕೊಲೆ ಆರೋಪ ಎದುರುಸುತ್ತಿರುವ ಸಚಿವ ಈಶ್ವರಪ್ಪ ರಾಜಿನಾಮೆ ಆಗ್ರಹಿಸಿ ಸಿಎಂ ಕಾರಿಗೆ ಮುತ್ತಿಗೆ ಯತ್ನಿಸಲಾಯಿತು.

ಮಂಗಳೂರಿನ ಬಂಟರ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದ ಸಿಎಂ ಕಾರಿಗೆ SDPI ಕಾರ್ಯಕರ್ತರು ಘೋಷಣೆ ಕೂಗುತ್ತಾ ಮುತ್ತಿಗೆ ಯತ್ನಿಸಿದ್ದಾರೆ.

ವೀಡಿಯೋ ನೋಡಿ:

ಕೂಡಲೇ ಭದ್ರತಾ ಸಿಬ್ಬಂದಿಗಳು ಕಾರ್ಯಕರ್ತರನ್ನು ತಡೆದು, ಹಲವರನ್ನು ವಶಕ್ಕೆ ಪಡೆದರು.

By dtv

Leave a Reply

Your email address will not be published. Required fields are marked *

error: Content is protected !!