ಕೇರಳ: ತನ್ನ ಪ್ರಿಯಕರ ಬಿಟ್ಟು ಹೋಗುತ್ತಾನೆ ಎಂಬ ಭಯದಿಂದ ಪಾಪಿ ತಾಯಿಯೋರ್ವಳು ತನ್ನ ಮೂರು ವರ್ಷದ ಎಳೆಯ ಕಂದಮ್ಮನನ್ನು ಕೊಲೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.
ಮಗುವಿನ ತಾಯಿ ಆಸಿಯಾ ಹಾಗೂ ಆಕೆಯ ಪತಿ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದಿಂದ ಬೇರ್ಪಟ್ಟಿದ್ದರು. ಇದರ ಬೆನ್ನಲ್ಲೇ ಆಸಿಯಾ ಬೇರೆ ವ್ಯಕ್ತಿ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಆದರೆ ಮಹಿಳೆಗೆ ಮಗುವಿದೆ ಎಂಬ ವಿಚಾರ ಆಸಿಯಾ ಪ್ರಿಯಕರನಿಗೆ ಗೊತ್ತಿರಲಿಲ್ಲ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ಇಬ್ಬರ ನಡುವೆ ಜಗಳವಾಗಿದೆ. ಆತ ತನ್ನಿಂದ ದೂರ ಹೋಗುತ್ತಾನೆಂಬ ಕಾರಣದಿಂದ ಮಗುವನ್ನು ಕೊಲೆ ಮಾಡಿದ್ದಾಳೆ.
ನಿನ್ನೆ ಬೆಳಗ್ಗೆ 10 ಗಂಟೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಖರ್ಜೂರ ನುಂಗಿ ಅದು ಸಾವನ್ನಪ್ಪಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ, ಅನುಮಾನಗೊಂಡ ಪೊಲೀಸರು ಆಸಿಯಾಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಆರೋಪಿಯನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಆಸಿಯಾ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.