ಪುತ್ತೂರು: ತಾಲೂಕಿನ ಸುತ್ತಮುತ್ತ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ತಕ್ಷಣಕ್ಕೆ ಸುರಿದ ಬಿರುಗಾಳಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಹಲವಡೆ ಮರಗಳು ಧರೆಗುರುಳಿವೆ.
ತಾಪಮಾನ ಏರಿಕೆ ಹಿನ್ನೆಲೆ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರದಿದ್ದಾನೆ. ಆದರೆ, ಜೋರಾಗಿ ಸುರಿಯುತ್ತಿರುವ ಗಾಳಿ, ಮಳೆಗೆ ವಾಹನ ಸವಾರರು ಅಸ್ತವ್ಯಸ್ತರಾಗಿದ್ದಾರೆ. ಕೆಲವೆಡೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ತೊಂದರೆ ಉಂಟಾಗಿದೆ. ಗಾಳಿ ಸಹಿತ, ಗುಡುಗು ಮಳೆ ಕಂಡುಬಂದಿದೆ. ಅನೀರಿಕ್ಷಿತ ಮಳೆಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಇನ್ನು ಭಾರೀ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪುತ್ತೂರು ಜಾತ್ರೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಗುಡುಗಿನ ಆರ್ಭಟ ಜೋರಾಗಿದ್ದು, ಗಾಳಿಗೆ ವೇದಿಕೆಯ ಸುತ್ತಮುತ್ತಾ ಹಾಕಿದ್ದ ತಾತ್ಕಾಳಿಕ ಸೀಟ್’ಗಳು ಹಾರಿ ಹೋಗಿದೆ.
ಇನ್ನು ಜಾತ್ರೆಗೆ ವ್ಯಾಪಾರಕ್ಕೆ ಬಂದವರ ಅಂಗಡಿಗಳ ಸೀಟ್’ಗಳು ಗಾಳಿಗೆ ಹಾರಿ ಹಲವು ಅಂಗಡಿಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.