dtvkannada

'; } else { echo "Sorry! You are Blocked from seeing the Ads"; } ?>

ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ, ಬಾಲಿವುಡ್ನಲ್ಲೂ ಗುರುತಿಸಿಕೊಂಡಿರುವ ನಟಿ ಛವಿ ಮಿತ್ತಲ್ (lಸ್ತನ ಕ್ಯಾನ್ಸರ್ಗೆ (Breast Cancer) ತುತ್ತಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ನಟಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಛವಿ ಹೇಳಿಕೊಂಡಿದ್ದಾರೆ. ತಮ್ಮ ಫೋಟೊ ಹಂಚಿಕೊಂಡಿರುವ ಛವಿ ಮಿತ್ತಲ್, ಅದಕ್ಕೆ ದೀರ್ಘವಾದ ಕ್ಯಾಪ್ಶನ್ ಬರೆದಿದ್ದಾರೆ. ಅದರಲ್ಲಿ ತಮ್ಮ ಮಕ್ಕಳಿಗೆ ಹಾಲುಣಿಸಿದ್ದನ್ನು ಸ್ಮರಿಸಿರುವ ನಟಿ, ‘ಇದು ಆಗಬಾರದಿತ್ತು. ಆದರೆ ಈ ಖಾಯಿಲೆ ನನ್ನ ಛಲವನ್ನು ತಗ್ಗಿಸುವುದಿಲ್ಲ. ಇದರಿಂದ ಹೊರಬರುವುದು ಸುಲಭವಲ್ಲ ಹಾಗಂತ ಕಷ್ಟವೂ ಅಲ್ಲ. ನಾನು ಮೊದಲಿನಂತೆ ಆಗುವುದಿಲ್ಲ. ಆದರೆ ನನ್ನನ್ನು ಇದು ಬದಲಾಯಿಸುವುದಿಲ್ಲ’ ಎಂದು ಹೇಳಿದ್ದಾರೆ.

ಛವಿ ಮಿತ್ತಲ್ ತಮ್ಮ ಪೋಸ್ಟ್​ ಅನ್ನು ಮಕ್ಕಳಿಗೆ ಮಮತೆಯಿಂದ ಹಾಲುಣಿಸಿದ ತಮ್ಮ ಸ್ತನಗಳಿಗೆ ಅರ್ಪಿಸಿದ್ದು, ಅದು ಕಷ್ಟಕಾಲದಲ್ಲಿದ್ದಾಗ ಅದರೊಂದಿಗೆ ನಿಲ್ಲುತ್ತೇನೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ‘‘ನನಗೆ ಮೊದಲ ಬಾರಿಗೆ ಅಪರಿಮಿತ ಖುಷಿಯನ್ನು ನೀಡಿದಾಗ ನಿನ್ನ ಮ್ಯಾಜಿಕ್​ನ ಅರಿವಾಯಿತು. ಆದರೆ ನಿನ್ನ ಮಹತ್ವ ಅರಿವಾಗಿದ್ದು ಮಕ್ಕಳಿಗೆ ಹಾಲುಣಿಸುವಾಗ. ಈಗ ನೀನು ಕ್ಯಾನ್ಸರ್​ನೊಂದಿಗೆ ಹೋರಾಡುವಾಗ ನಾನು ನಿನ್ನ ಪರವಾಗಿ ನಿಲ್ಲಬೇಕಾಗಿದೆ. ಇದು ಆಗಬೇಕಾಗಿದ್ದ ಒಳ್ಳೆಯ ಬೆಳವಣಿಗೆ ಅಲ್ಲ, ಆದರೆ ಇದರಿಂದ ನಮ್ಮ ಆತ್ಮವಿಶ್ವಾಸವೇನೂ ಕಡಿಮೆಯಾಗುವುದಿಲ್ಲ. ನಾನು ಮೊದಲಿನಂತೆ ಆಗದಿರಬಹುದು ಆದರೆ ಇದರಿಂದ ನನ್ನ ಯೋಚನೆಗಳಿಗೆ ತೊಡಕಾಗುವುದಿಲ್ಲ’’ ಎಂದಿದ್ದಾರೆ ಛವಿ ಮಿತ್ತಲ್.

'; } else { echo "Sorry! You are Blocked from seeing the Ads"; } ?>

ಕ್ಯಾನ್ಸರ್ನಿಂದ ಗುಣಮುಖರಾಗಿರುವವರನ್ನು ಉದ್ದೇಶಿಸಿ, ಅವರಿಂದ ನಿತ್ಯವೂ ಪ್ರೇರಣೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ ನಟಿ. ಅಲ್ಲದೇ ಈ ಪರಿಸ್ಥಿತಿಯಲ್ಲಿ ಜತೆಯಾಗಿ ನಿಂತ ಎಲ್ಲರಿಗೂ ಛವಿ ಧನ್ಯವಾದ ಹೇಳಿದ್ದಾರೆ. ಎಲ್ಲರ ಹಾರೈಕೆ, ಪ್ರಾರ್ಥನೆ ಬದಲಾವಣೆಗೆ ನಾಂದಿಯಾಗಲಿದೆ ಎಂದು ಅವರು ಬರೆದಿದ್ದಾರೆ.

ಛವಿ ಮಿತ್ತಲ್ ಪೋಸ್ಟ್ ಇಲ್ಲಿದೆ:

'; } else { echo "Sorry! You are Blocked from seeing the Ads"; } ?>

ನಟಿಯ ಅಭಿಮಾನಿಗಳು, ಸಹನಟರು, ಖ್ಯಾತ ತಾರೆಯರು ಕಾಮೆಂಟ್ಗಳ ಮೂಲಕ ನಟಿಗೆ ಧೈರ್ಯ ಹೇಳಿದ್ದು, ಈ ಹೋರಾಟದಲ್ಲಿ ಜತೆಯಿದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ. ನಟ ಅರ್ಜುನ್ ಬಿಜಲಾನಿ ಪ್ರತಿಕ್ರಿಯಿಸಿ, ‘‘ದೇವರು ಇದನ್ನು ಎದುರಿಸುವ ಎಲ್ಲಾ ಶಕ್ತಿಯನ್ನು ಕುಟುಂಬಕ್ಕೆ ಹಾಗೂ ನಿಮಗೆ ಕೊಡಲಿ’’ ಎಂದು ಬರೆದಿದ್ದಾರೆ. ನಟಿ ಮೇಘನಾ ನಾಯ್ಡು ಕೂಡ ಛವಿಗೆ ಧೈರ್ಯ ತುಂಬಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!