IPL 2022: ಐಪಿಎಲ್ನ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆರ್ಸಿಬಿ ತಂಡವು ಜಯ ಸಾಧಿಸಿದೆ. ಆರ್ಸಿಬಿ ನೀಡಿದ 190 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಡೆಲ್ಲಿ ಒಂದು ಹಂತದಲ್ಲಿ ಗೆಲುವಿನ ಸಮೀಪದಲ್ಲಿತ್ತು. ಏಕೆಂದರೆ 16 ಓವರ್ನಲ್ಲಿ 142 ರನ್ಗಳಿಸಿದ್ದ ಡೆಲ್ಲಿ ಪರ ಸ್ಪೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ ಆಡುತ್ತಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ 17ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಒಂದು ಅದ್ಭುತ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಿತು. ಮೊಹಮ್ಮದ್ ಸಿರಾಜ್ ಎಸೆದ 17ನೇ ಓವರ್ನ ಮೂರನೇ ಎಸೆತದಲ್ಲಿ ರಿಷಭ್ ಪಂತ್ ಡೀಪ್ ಕವರ್ನತ್ತ ಭರ್ಜರಿ ಹೊಡೆತ ಬಾರಿಸಲು ಮುಂದಾಗಿದ್ದರು. ಆದರೆ 30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಚಂಗನೆ ಜಿಗಿಯುವ ಮೂಲಕ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.
ಅತ್ತ ವಿರಾಟ್ ಕೊಹ್ಲಿಯ ಈ ಅದ್ಭುತ ಕ್ಯಾಚ ನೋಡಿ ಆರ್ಸಿಬಿ ಅಭಿಮಾನಿಗಳು ದಂಗಾಗಿದ್ದರು. ಇನ್ನು ಕ್ಯಾಚ್ ಹಿಡಿದ ಬಳಿಕ ತನ್ನನ್ನು ಹುರಿದುಂಬಿಸುತ್ತಿದ್ದ ಪತ್ನಿ ಅನುಷ್ಕಾ ಶರ್ಮಾ ಅವರತ್ತ ಕೈ ಬೀಸಿ ಕೊಹ್ಲಿ ಸಂಭ್ರಮಿಸಿದ್ದರು.
ಆದರೆ ಈ ಅತ್ಯಾಧ್ಬುತ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಅರ್ಪಿಸಿದ್ದು ಮಾತ್ರ ಮತ್ತೊಬ್ಬರಿಗೆ ಎಂಬುದು ವಿಶೇಷ. ಹೌದು, ಪಂದ್ಯದ ಬಳಿಕ ಮಾತನಾಡಿರುವ ವಿರಾಟ್ ಕೊಹ್ಲಿ ತಾನು ಹಿಡಿದ ಈ ಫೆಂಟಾಸ್ಟಿಕ್ ಕ್ಯಾಚ್ ಅನ್ನು ಎಬಿ ಡಿವಿಲಿಯರ್ಸ್ಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ದಿನೇಶ್ ಕಾರ್ತಿಕ್ ಅವರ ಭರ್ಜರಿ ಹೊಡೆತಗಳನ್ನು ಕೂಡ ಎಬಿಡಿಗೆ ಸಮರ್ಪಿಸುತ್ತಿದ್ದೇವೆ. ಏಕೆಂದರೆ ಅವರು ಆರ್ಸಿಬಿ ತಂಡದಲ್ಲಿದ್ದಾಗ ಇವೆಲ್ಲವನ್ನೂ ಒಬ್ಬರಾಗಿ ಮಾಡುತ್ತಿದ್ದರು. ಇದೀಗ ನಾವು 2-3 ಮಂದಿ ಸೇರಿ ಎಬಿಡಿ ತಂಡಕ್ಕೆ ಮಾಡಿದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಕ್ಯಾಚ್ ಅನ್ನು ತಮ್ಮ ಗೆಳೆಯ ಎಬಿ ಡಿವಿಲಿಯರ್ಸ್ಗೆ ಅರ್ಪಿಸುವ ಮೂಲಕ ಮತ್ತೊಮ್ಮೆ ಕಿಂಗ್ ಕೊಹ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ.