ಕೋಝಿಕ್ಕೋಡ್: ನೀರಿನ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿಕೊಂಡು ಮೂರು ವರ್ಷದ ಬಾಲಕಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತಪಟ್ಟ ಪುಟ್ಟ ಬಾಲಕಿಯು ಕೇರಳದ ರಾಜ್ಯದ ಕೋಝಿಕ್ಕೋಡ್‌ನ ಮುಕ್ಕಮ್‌ನ ದೇವಿಕಾ (೩) ಎಂದು ಗುರುತಿಸಲಾಗಿದೆ.
ಮುಚ್ಚಳವು ಗಂಟಲಿನಲ್ಲಿ ಸಿಲುಕಿಕೊಂಡ ತಕ್ಷಣ ಪುಟ್ಟ ಬಾಲಕಿಯನ್ನು ಮನೆಯವರು ಕೋಝಿಕ್ಕೋಡ್‌ನ ಮುಕ್ಕಮ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಬಾಟಲಿಯ ಮುಚ್ಚಳವು ಮಗುವಿನ ಗಂಟಲಿನಲ್ಲಿ ಬಿಗಿಯಾಗಿ ಸಿಕ್ಕಿಕೊಂಡಿದ್ದನ್ನು ಅರಿತು ವೈದ್ಯರು ಮಗುವನ್ನು ಕೂಡಲೇ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲು ಸೂಚಿಸಿದ್ದರು ಅದರಂತೆ ಮಗುವನ್ನು ಅಲ್ಲಿಗೆ ಕರೆದೊಯ್ದಿದ್ದು ಆದರೆ ಅಲ್ಲಿಗೆ ತಲುಪಿ ರಾತ್ರಿಯಾಗುವಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.