dtvkannada

ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ಸಾಮಾನ್ಯವಾಗಿ ಶಾಂತ ಸ್ವಭಾವದ ವ್ಯಕ್ತಿ. ಅವರು ತಾಳ್ಮೆ ಕಳೆದುಕೊಂಡಿದ್ದು ನೋಡಿರುವುದು ತೀರಾ ಅಪರೂಪ. ಆದರೆ, ಐಪಿಎಲ್ 2022 ರಲ್ಲಿ (IPL 2022) ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡಿದ್ದರು. ದೊಡ್ಡ ಟಾರ್ಗೆಟ್ ಬೆನ್ನಟ್ಟುವ ಒತ್ತಡದಲ್ಲಿ ಶ್ರೇಯಸ್ ತಮ್ಮದೇ ತಂಡದ ಆಟಗಾರ ವೆಂಕಟೇಶ್ ಅಯ್ಯರ್ ಮೇಲೆ ರೇಗಾಡಿದರು.

ಅಷ್ಟೇ ಅಲ್ಲದೆ ಔಟಾದ ಬಳಿಕ ಡಗೌಟ್​ಗೆ ತೆರಳಿ ಅಲ್ಲಿ ಕೆಕೆಆರ್ ತಂಡದ ಕೋಚ್ ಬ್ರೆಂಡನ್ ಮೆಕಲಮ್​ ಜೊತೆಗೂ ಕಿರುಚಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಶಾಂತ ಸ್ವಭಾವದ ಶ್ರೇಯಸ್ ಅಯ್ಯರ್ ಇಷ್ಟರ ಮಟ್ಟಿಗೆ ಕೋಪಗಳ್ಳಲು ಕಾರಣವಾದರೂ ಏನು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ರಾಜಸ್ಥಾನ್ ರಾಯಲ್ಸ್ ನೀಡಿದ್ದ 218 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಲು ಬಂದ ಕೆಕೆಆರ್ ಆರಂಭದಿಂದಲೂ ವಿಭಿನ್ನ ಪ್ರಯೋಗ ನಡೆಸುತ್ತಾ ಸಾಗಿತು. ಆದರೆ, ಅದು ಯಾವುದು ಕೂಡ ಕಾರ್ಯರೂಪಕ್ಕೆ ಬರಲಿಲ್ಲ. ಓಪನರ್ ಆಗಿ ಕಣಕ್ಕಿಳಿದು ಯಶಸ್ಸು ಸಾಧಿಸಿರುವ ವೆಂಕಟೇಶ್ ಅಯ್ಯರ್ ಅವರನ್ನು ಮೆಕಲಮ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರು. ಈ ನಿರ್ಧಾರ ಎಲ್ಲರ ಗ್ರಹಿಕೆಗೆ ಮೀರಿತ್ತು. ಇದೇ ಸಮಯದಲ್ಲಿ, ಶಿವಂ ಮಾವಿ ಕೂಡ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟ್ ಮಾಡಲು ಬಂದರು. ಕಮ್ಮಿನ್ಸ್ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಈ ವಿಚಾರವಾಗಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಮೆಕಲಮ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಅಯ್ಯರ್ ಪೆವಿಲಿಯನ್​ಗೆ ಹೋಗುತ್ತಿದ್ದಾಗ ಮೆಕಲಮ್ ಜೊತೆ ಸಿಟ್ಟಿನಿಂದ ಮಾತನಾಡುತ್ತಿರುವುದು ಕಂಡುಬಂದಿದೆ.

https://twitter.com/SlipDiving/status/1516125922419961856?

ಇದಕ್ಕೂ ಮೊದಲು ಮೈದಾನದಲ್ಲಿ ರನ್ ಗಳಿಸುವ ವಿಚಾರಕ್ಕೆ ಶ್ರೇಯಸ್ ಅಯ್ಯರ್ ಅವರು ವೆಂಕಟೇಶ್ ಮೇಲೆ ರೇಗಾಡಿದ್ದಾರೆ. ಈ ಘಟನೆ ನಡೆದಿದ್ದು 16ನೇ ಓವರ್​ನ ಟ್ರೆಂಟ್ ಬೌಲ್ಟ್ ಅವರ ಐದನೇ ಎಸೆತದಲ್ಲಿ. ಆ ಸಂದರ್ಭ ಕೆಕೆಆರ್​ಗೆ ಗೆಲ್ಲಲು 25 ಎಸೆತಗಳಲ್ಲಿ 41 ರನ್​​ಗಳ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿದ್ದ ವೆಂಕಟೇಶ್ ಚೆಂಡನ್ನು ಡೀಪ್ ಪಾಯಿಂಟ್​ಗೆ ಅಟ್ಟಿದರು. ಶ್ರೇಯಸ್ ಎರಡು ರನ್​ಗೆಂದು ಜೋರಾಗಿ ಓಡಿದರು. ಆದರೆ, ವೆಂಕಟೇಶ್ ಒಂದು ರನ್​ಗೆ ತೃಪ್ತಿ ಪಟ್ಟರು. ವೆಂಕಟೇಶ್ ಒಂದು ರನ್ ಸಾಕು ಎಂದು ಹೇಳುವ ಹೊತ್ತಿಗೆ ಶ್ರೇಯಸ್ ಎರಡು ರನ್​ಗೆಂದು ಅರ್ಧದ ವರೆಗೆ ತಲುಪಿದ್ದರು. ನಂತರ ರನೌಟ್​​ನಿಂದ ಪಾರಾಗಿ ಸುಲಭವಾಗಿ ಎರಡು ರನ್ ತೆಗೆದುಕೊಳ್ಳಬಹುದಿತ್ತು ಎಂದು ವೆಂಕಟೇಶ್ ಮೇಲೆ ರೇಗಾಡಿದ್ದಾರೆ.

https://twitter.com/addicric/status/1516111965600378884?

ಈ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನನಟ್ಟಿದ ಕೆಕೆಆರ್ ತಂಡದ ಪರವಾಗಿ ಅನುಭವಿ ಆರೋನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರಿಂದ ಭರ್ಜರಿ ಪ್ರದರ್ಶನ ಬಂತು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅಯ್ಯರ್ ಕೆಕೆಆರ್ ತಂಡಕ್ಕೆ ಜಯವನ್ನು ನೀಡಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಯುಜ್ವೇಂದ್ರ ಚಹಲ್ ಕೆಕೆಆರ್ ತಂಡದ ಯೋಜನೆಯನ್ನು ಬುಡಮೇಲು ಮಾಡಿದರು. ಫಿಂಚ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಔಟಾದರು. ಅಯ್ಯರ್ 51 ಎಸೆತಗಳನ್ನು ಎದುರಿಸಿದ ಅಯ್ಯರ್ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ನಿರ್ಗಮಿಸಿದರು. ಕೊನೆಯವರಾಗಿ ಔಟ್ ಆದ ಉಮೇಶ್ ಯಾದವ್ ಗೆಲುವಿಗಾಗಿ ಪ್ರಯತ್ನಿಸಿದರೂ ಕೆಕೆಆರ್ಗೆ ಜಯ ದಕ್ಕಲಿಲ್ಲ.

By dtv

Leave a Reply

Your email address will not be published. Required fields are marked *

error: Content is protected !!