ಮಂಗಳೂರು: ಮನೆಯ ಬಳಿ ಸೈಕಲ್’ನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿಯಾಗಿ 6 ವರ್ಷದ ಕಂದಮ್ಮ ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ.
ಇಲ್ಲಿನ ಕಟ್ಟಪುಣಿ ನಿವಾಸಿಯಾಗಿರುವ ಹಿದಾಯತುಲ್ಲ ಅವರ ಮಗ ಮೊಹಮ್ಮದ್ ಜೀಶನ್(6) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಇಂದು ಸಂಜೆ ಬಾಲಕ ಸೈಕಲ್ ನಲ್ಲಿ ತನ್ನ ಮನೆಯ ಬಳಿಯಲ್ಲಿರುವ ರಸ್ತೆ ಬಳಿ ಆಟವಾಡುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ಬಂದ ಟಿಪ್ಪರ್ ಬಾಲಕನ ಮೇಲೆಯೇ ಹರಿದಿದೆ.
ಟಿಪ್ಪರ್ ಚಾಲಕನ ಅಜಾಕರೂಕತೆಯೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.