';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹರಪನಹಳ್ಳಿ: ನಾರದಮುನಿ ರಥೋತ್ಸವದ ವೇಳೆ ತೇರಿನ ಚಕ್ರಕ್ಕೆ ಸಿಲುಕಿ ಭಕ್ತರೊಬ್ಬರು ಮೃತಪಟ್ಟ ಘಟನೆ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ದಾವಣಗೆರೆಯ ಸುರೇಶ್ ಬಸವನಗೌಡ (45) ಎಂದು ಗುರುತಿಸಲಾಗಿದೆ. ತೇರು ಚಲಿಸುವಾಗ ನೂಕು ನುಗ್ಗಲಿನಲ್ಲಿ ಸುರೇಶ್ ಚಕ್ರದ ಅಡಿಗೆ ಸಿಲುಕಿದ್ದಾರೆ. ಅವರ ಮೇಲೆ ಗಾಲಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೇರು ದೇವಸ್ಥಾನದಿಂದ ಸ್ವಲ್ಪ ದೂರ ಕ್ರಮಿಸಿದಾಗ ಈ ಘಟನೆ ನಡೆದಿದೆ. ಘಟನೆಯಿಂದ ಭಕ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಪೊಲೀಸರು ಜನರನ್ನು ನಿಯಂತ್ರಿಸಿ, ಶವ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಬಳಿಕ ತೇರಿನ ಗಾಲಿಯನ್ನು ನೀರಿನಿಂದ ತೊಳೆದು ದೇವಸ್ಥಾನದ ವರೆಗೆ ಎಳೆಯಲಾಯಿತು. ಸಂಜೆಯ ಘಟನೆಯಿಂದ ದಿನವಿಡೀ ಇದ್ದ ಸಂಭ್ರಮ ಮರೆಯಾಗಿತ್ತು.