dtvkannada

ಪುತ್ತೂರು: ಅಪ್ರಾಪ್ತ ಬಾಲಕನಿಗೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪುತ್ತೂರು ತಾಲೂಕಿನ ಕಾವು ಸಮೀಪ ನಡೆದಿದೆ.

ಬಾಲಕ ತನ್ನ ಅಜ್ಜಿಯೊಂದಿಗೆ ಅಂಗಡಿಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಬೈಕ್’ನಲ್ಲಿ ಬಂದ ಅಪರಿಚಿತ ವ್ಯಕ್ತಿ, ಬಾಲಕನ ಬಳಿ ಬಂದು ನಿನ್ನನ್ನು ಅಜ್ಜಿ ಮನೆಗೆ ಬಿಡುತ್ತೇನೆ ಬಾ ಎಂದು ಕರೆದಿದ್ದಾನೆ. ಇದಕ್ಕೆ ಬಾಲಕ ಒಪ್ಪದಿದ್ದಾಗ, ಬಾಲಕನ ತಂದೆಯ ಹೆಸರು ಹೇಳಿ, ನಿನ್ನನ್ನು ಮನೆಗೆ ಬಿಡುತ್ತೇನೆ ಬಾ ಎಂದು ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಬಾಲಕ ಬೈಕ್ ನಲ್ಲಿ ಕುಳಿತುಕೊಂಡ ನಂತರ ವ್ಯಕ್ತಿ ಬಾಲಕನನ್ನು ಈಶ್ವರಮಂಗಲ ಕಡೆಗೆ ಕರೆದುಕೊಂಡು ಹೋಗಿದ್ದು, ದಾರಿಮದ್ಯೆ ಕಾಡಿಗೆ ಕರೆದುಕೊಂಡು ಹೋಗಿ ಬಾಲಕನ ಮೇಲೆ ಅತ್ಯಾಚಾರ ವೆಸಗಿ, ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಕ್ರ: 53/2022 ಕಲo: 363, 377, 506, ಐಪಿಸಿ,ಕಲಂ.4 ಪೋಕ್ಸೋ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!