dtvkannada

ಬಂಟ್ವಾಳ: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ +2 ತರಗತಿಗೆ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಕುಕ್ಕಾಜೆ ಸಿರಾಜುಲ್ ಹುದಾ ಮದರಸದ ವಿಧ್ಯಾರ್ಥಿನಿ ಫಾತಿಮತ್ ರಝೀನ 88% ಅಂಕಗಳೊಂದಿಗೆ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅದೇ ರೀತಿ ಫಾತಿಮತ್ ಫಾಯಿದ 82% ಅಂಕಗಳೊಂದಿಗೆ ಪುತ್ತೂರು ರೇಂಜ್ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿಧ್ಯಾರ್ಥಿನಿಗಳ ಈ ಸಾಧನೆಗೆ ಆಡಳಿತ ಸಮಿತಿ ಹಾಗೂ ಅಧ್ಯಾಪಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕುಕ್ಕಾಜೆ ಸಿರಾಜುಲ್ ಹುದಾ ಮದರಸದ +2 ತರಗತಿಯ ಪ್ರಥಮ ಬ್ಯಾಚ್ ಇದಾಗಿದ್ದು, ಉತ್ತಮ ಫಲಿತಾಂಶವು ವಿಧ್ಯಾರ್ಥಿಗಳಲ್ಲಿ ಹಾಗೂ ಊರಿನವರಲ್ಲಿ ಹೊಸ ಹುಮ್ಮಸ್ಸನ್ನು ನೀಡಿದೆ. ಉಳಿದಂತೆ 5 ನೇ ಹಾಗೂ 7 ನೇ ತರಗತಿಗಳಲ್ಲೂ 100% ಫಲಿತಾಂಶ ಬಂದಿದೆ. ಎಲ್ಲಾ ವಿಧ್ಯಾರ್ಥಿಗಳಿಗೂ ಆಡಳಿತ ಮಂಡಳಿ ಹಾಗೂ ಮದರಸಾ ವತಿಯಿಂದ ಈ ಮೂಲಕ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ ಎಂದು ಮದರಸ ಸದರ್ ಮುಅಲ್ಲಿಂ ಎ.ಎಂ.ಫೈಝಲ್ ಝುಹ್‌ರಿ ಅಲ್-ಫುರ್ಖಾನಿ ಯವರು ಪತ್ರಿಕೆಗೆ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!