dtvkannada

ರಾಯಚೂರು : ಭಗ್ನ ಪ್ರೇಮಿಗಳಿಬ್ಬರು ಒಂದೇ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂಧನೂರು ತಾಲ್ಲೂಕಿನ ಆರ್ ಎಚ್ ಕ್ಯಾಂಪ್ -3 ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿಗಳು ಲವ್ ಸರ್ಕಾರ್( 24 )ಮತ್ತು ಕರೀನಾ ( 19 )ಎಂದು ತಿಳಿದು ಬಂದಿದೆ.

ಲವ್ ಸರ್ಕಾರ್ ಎಂಬಾತ ಇಬ್ಬರು ಯುವತಿಯರನ್ನು ಪ್ರೀತಿಸಿದ್ದನು.ಅದರಲ್ಲಿ ಒಬ್ಬರು ಈ 19 ವರ್ಷದ ಕರೀನಾ ಆಗಿದ್ದಳು ಹೀಗಿರುವಾಗ ಕರೀನಾಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು.

ಇದರಿಂದ ಕರೀನಾ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಲು ಹೊರಟಿದ್ದು ಇತ್ತ ಕರೀನಾಳನ್ನೂ ಬಿಟ್ಟು ಇರಲು ಆಗದೇ ಲವ್ ಸರ್ಕಾರ್ ಕರೀನಾ ಜತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೆಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!