ಮಂಗಳೂರು: ನಗರ ಹೊರವಲಯದ ರಾ.ಹೆ.66ರ ಜಪ್ಪಿನಮೊಗರು ಸಮೀಪದ ನಡುಮೊಗರು ಎಂಬಲ್ಲಿ ನಿನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಮೃತಪಟ್ಟಿದ್ದಾರೆ.ಮೃತಪಟ್ಟ ಸ್ಕೂಟರ್ ಸವಾರನನ್ನು ರೊನಾಲ್ಡ್ (59) ಎಂದು ತಿಳಿದು ಬಂದಿದೆ.
ಕಾರ್ಯನಿಮಿತ್ತ ಮಂಗಳೂರು ನಗರಕ್ಕೆ ಆಗಮಿಸಿ ಕೊಣಾಜೆಯಲ್ಲಿರುವ ತನ್ನ ಮನೆಗೆ ರೊನಾಲ್ಡ್ ಮರಳುತ್ತಿದ್ದಾಗ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿಯು ಸ್ಕೂಟರ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಇದರಿಂದ ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದು ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಲಾರಿಯು ಮೊದಲು ಕಾರಿಗೆ ಢಿಕ್ಕಿ ಹೊಡೆದಿದ್ದು, ಬಳಿಕ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇನ್ನು ಇದೇ ವೇಳೆ ಅದೇ ದಾರಿಯಾಗಿ ಸಾಗುತ್ತಿದ್ದ ಯು.ಟಿ ಖಾದರ್ ಅವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಸದ್ಯ ಮಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.