ಉಪ್ಪಿನಂಗಡಿ: ಅಧಿಕಾರಿಗಳ ಗೈರು ಹಾಜರಿಯಿಂದ ಗ್ರಾಮಸ್ಥರು ಗ್ರಾಮ ಸಭೆಯನ್ನು ಬಹಿಷ್ಕರಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುನಲ್ಲಿ ನಡೆದಿದೆ.
ತೆಕ್ಕಾರು ಗ್ರಾಮ ಸಭೆಯೂ ದಿನಾಂಕ 22/04/22 ಶುಕ್ರವಾರ ದಂದು ಸರಳಿಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗ್ರಾಮ ಸಭೆಗೆ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದು.
ಗ್ರಾಮಸ್ಥರ ಮುಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವರದಿ ವಾಚಿಸಲು ಎದ್ದು ನಿಂತಾಗ ಗ್ರಾಮಸ್ಥರು ಇಲಾಖಾಧಿಕಾರಿಗಳು ಎಲ್ಲಿದ್ದಾರೆ? ಅವರು ಬಾರದೇ ನಮ್ಮ ಅಹವಾಲುಗಳನ್ನು ಯಾರಿಗೆ ತಿಳಿಸುವುದು ಎಂದು ಹೇಳಿ ಪಕ್ಷ ಭೇದ ಮರೆತು ಗ್ರಾಮಸ್ಥರ ಒಗ್ಗಟ್ಟಿನಿಂದ ಗ್ರಾಮ ಸಭೆಯನ್ನು ರದ್ದು ಪಡಿಸಿದ್ದಾರೆ.
ಈ ಹಿಂದೆ ತೆಕ್ಕಾರು ಗ್ರಾಮ ಪಂಚಾಯತ್ ನೂತನ ಕಟ್ಟಡದ ವಿಚಾರದಲ್ಲಿ ಹಲವಾರು ತಕರಾರುಗಳು ನಡೆದಿದ್ದು ಪಂಚಾಯತ್ ಸದಸ್ಯೆ ಯಮುನಾ ಎಂಬವರು ಇದು ನನ್ನ ಜಾಗ ಎಂದು ನೂತನ ಕಟ್ಟಡದ ಸುತ್ತ ಬೇಲಿ ಹಾಕಿ ಕಟ್ಟಡದ ಒಳಗೆ ವಾಸ್ತವ ಹೂಡಿದ್ದು ಈ ಘಟನೆ ನಡುವೆ ಗ್ರಾಮ ಸಭೆ ಕರೆದಿದ್ದು.
ಈ ನಡೆಯ ಬಗ್ಗೆ ಪ್ರಶ್ನಿಸಲು ಹಲವಾರು ಗ್ರಾಮಸ್ಥರು ಗ್ರಾಮ ಸಭೆಗೆ ಹಾಜರಾಗಿದ್ದರು ಆದರೆ ಇಲಾಖಾಧಿಕಾರಿಗಳೇ ಗ್ರಾಮ ಸಭೆಗೆ ಹಾಜರಾಗದೇ ಇರುವಾಗ ಗ್ರಾಮಸ್ಥರೇ ಸಭೆಯಿಂದ ಎದ್ದು ಹೋಗಿ ಗ್ರಾಮ ಸಭೆಯನ್ನು ರದ್ದುಗೊಳಿಸಿದ್ದಾರೆ.
ಇದೀಗ ಅಧಿಕಾರಿಗಳ ಜಾಣ ಕುರುಡು ನಾಟಕದ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.