dtvkannada

'; } else { echo "Sorry! You are Blocked from seeing the Ads"; } ?>

ಮುಂಬೈ: ಶಿಖರ್ ಧವನ್ ಅಜೇಯ ಅರ್ಧಶತಕ (88*) ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 11 ರನ್ ಅಂತರದ ಗೆಲುವು ದಾಖಲಿಸಿದೆ. 

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಶಿಖರ್ ಧವನ್ ಸಮಯೋಚಿತ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. 
ಬಳಿಕ ಗುರಿ ಬೆನ್ನಟ್ಟಿದ ಚೆನ್ನೈ, ಅಂಬಟಿ ರಾಯುಡು (78) ದಿಟ್ಟ ಹೋರಾಟದ ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

'; } else { echo "Sorry! You are Blocked from seeing the Ads"; } ?>

ಇದರೊಂದಿಗೆ ಗೆಲುವಿನ ಹಾದಿಗೆ ಮರಳಿರುವ ಮಯಂಕ್ ಅಗರವಾಲ್ ಪಡೆ, ಎಂಟು ಪಂದ್ಯಗಳಲ್ಲಿ ನಾಲ್ಕನೇ ಗೆಲುವಿನೊಂದಿಗೆ ಅಷ್ಟೇ ಅಂಕ ಸಂಪಾದಿಸಿ ಆರನೇ ಸ್ಥಾನಕ್ಕೇರಿದೆ. ಅತ್ತ ಚೆನ್ನೈ ಎಂಟು ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದೆ.

View this post on Instagram

A post shared by Punjab Kings (@punjabkingsipl)

'; } else { echo "Sorry! You are Blocked from seeing the Ads"; } ?>

ಸವಾಲಿನ ಮೊತ್ತ ಬೆನ್ನಟ್ಟಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ತಂಡವು 40 ರನ್ ಗಳಿಸುವಷ್ಟರಲ್ಲಿ ರಾಬಿನ್ ಉತ್ತಪ್ಪ (1), ಮಿಚೆಲ್ ಸ್ಯಾಂಟ್ನರ್ (9), ಶಿವಂ ದುಬೆ (8) ವಿಕೆಟ್‌ಗಳನ್ನು ಕಳೆದುಕೊಂಡಿತು. 
ಈ ಪೈಕಿ 2016ರ ಬಳಿಕ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ರಿಷಿ ಧವನ್, ಫೇಸ್ ಶೀಲ್ಡ್ ಧರಿಸಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ದುಬೆ ವಿಕೆಟ್ ಕಬಳಿಸಿ ಮಿಂಚಿದರು. 2016ರಲ್ಲಿ ರಣಜಿ ಟ್ರೋಫಿ ವೇಳೆ ರಿಷಿ ಗಾಯಗೊಂಡಿದ್ದರು. 

ಈ ಹಂತದಲ್ಲಿ ಜೊತೆಗೂಡಿದ ಋತುರಾಜ್ ಗಾಯಕವಾಡ್ ಹಾಗೂ ಅಂಬಟಿ ರಾಯುಡು 49 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಗಾಯಕವಾಡ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ರಾಯುಡು ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು. 
ಗಾಯಕವಾಡ್ 30 ರನ್ ಗಳಿಸಿ ಔಟ್ ಆದರು. ಅತ್ತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ರಾಯುಡು 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 

ಅಂತಿಮ 5 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 70 ರನ್ ಅಗತ್ಯವಿತ್ತು. ಸಂದೀಪ್ ಶರ್ಮಾ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 23 ರನ್ ಬಾರಿಸಿದ ರಾಯುಡು ಅಬ್ಬರಿಸಿದರು.


ರಾಯುಡು ಹಾಗೂ ಜಡೇಜ ಐದನೇ ವಿಕೆಟ್‌ಗೆ 32 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 18ನೇ ಓವರ್‌ನಲ್ಲಿ ಔಟ್ ಆಗುವ ಮೂಲಕ ರಾಯುಡು ನಿರಾಸೆಗೊಳಗಾದರು. 39 ಎಸೆತಗಳನ್ನು ಎದುರಿಸಿದ ರಾಯುಡು ಏಳು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ಕಗಿಸೊ ರಬಾಡ ಹಾಗೂ ಅರ್ಶದೀಪ್ ಸಿಂಗ್ ನಿಖರ ದಾಳಿ ಮಾಡುವ ಮೂಲಕ ಚೆನ್ನೈ ಗೆಲುವಿನ ಪ್ರಯತ್ನಕ್ಕೆ ತಡೆಯೊಡ್ಡಿದರು.

ಕೊನೆಯ ಓವರ್‌ನಲ್ಲಿ ಗೆಲುವಿಗೆ 27 ರನ್ ಬೇಕಾಗಿತ್ತು. ಆದರೆ ಈ ಬಾರಿ ಫಿನಿಶರ್ ಮಹೇಂದ್ರ ಸಿಂಗ್ ಧೋನಿಗೆ (12) ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ ಎಸೆದ ರಿಷಿ ಧವನ್ ಮಗದೊಮ್ಮೆ ಪ್ರಭಾವಿ ಎನಿಸಿದರು. 
ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರವೀಂದ್ರ ಜಡೇಜ 21 ರನ್ ಗಳಿಸಿ ಔಟಾಗದೆ ಉಳಿದರು. 
ಪಂಜಾಬ್ ಪರ ರಬಾಡ ಹಾಗೂ ರಿಷಿ ಧವನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಅರ್ಶದೀಪ್ 23 ರನ್ ತೆತ್ತು ಒಂದು ವಿಕೆಟ್ ಗಳಿಸಿದರು. 

200ನೇ ಐಪಿಎಲ್ ಪಂದ್ಯದಲ್ಲಿ ಧವನ್ ಫಿಫ್ಟಿ:
ಈ ಮೊದಲು 200ನೇ ಐಪಿಎಲ್ ಪಂದ್ಯ ಆಡಿದ ಧವನ್ ಅರ್ಧಶತಕದ (88*) ನೆರವಿನಿಂದ ಪಂಜಾಬ್ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿತ್ತು.  
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ (18) ಹಾಗೂ ಅನುಭವಿ ಶಿಖರ್ ಧವನ್ ಎಚ್ಚರಿಕೆಯ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 37 ರನ್ ಪೇರಿಸಿದರು. 

ಬಳಿಕ ಭಾನುಕ ರಾಜಪಕ್ಸ ಜೊತೆ ಸೇರಿದ ಧವನ್ ತಂಡವನ್ನು ಮುನ್ನಡೆಸಿದರು. ಈ ನಡುವೆ ಧವನ್, ಐಪಿಎಲ್‌ನಲ್ಲಿ 6,000 ಹಾಗೂ ಟಿ20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಸಾಧನೆ ಮಾಡಿದರು.
ಅಲ್ಲದೆ 37 ಎಸೆತಗಳಲ್ಲಿ ಐಪಿಎಲ್‌ನಲ್ಲಿ 46ನೇ ಅರ್ಧಶತಕ ಗಳಿಸಿದರು. ಚೆನ್ನೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಧವನ್-ಭಾನುಕ ಜೋಡಿ ದ್ವಿತೀಯ ವಿಕೆಟ್‌ಗೆ ಶತಕದ (110)ಜೊತೆಯಾಟದಲ್ಲಿ ಭಾಗಿಯಾದರು.
32 ಎಸೆತಗಳನ್ನು ಎದುರಿಸಿದ ರಾಜಪಕ್ಸ 42 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಬಳಿಕ ಕ್ರೀಸಿಗಿಳಿದ ಲಿಯಾಮ್ ಲಿವಿಂಗ್‌ಸ್ಟೋನ್, ಕೇವಲ 6 ಎಸೆತಗಳಲ್ಲಿ 19 ರನ್ ಗಳಿಸಿ ಅಬ್ಬರಿಸಿದರು.
ಅತ್ತ ಅಮೋಘ ಆಟ ಪ್ರದರ್ಶಿಸಿದ ಧವನ್ 88 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಪಂಜಾಬ್ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. 59 ಎಸೆತಗಳನ್ನು ಎದುರಿಸಿದ ಧವನ್ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!