ಬೆಂಗಳೂರು: ದೇಶದಲ್ಲಿ ಕೋವಿಡ್ ಸೋಂಕು ಬಂದು ಮೂರು ಹಂತಗಳು ಮುಗಿದು ಜನರೆಲ್ಲಾ ನೆಮ್ಮದಿಯಿಂದ ಜೀವನ ನಡೆಸಲು ತಿರ್ಮಾನಿಸುತ್ತಿರುವಾಗ ಮತ್ತೇ ನಾಲ್ಕನೇ ಅಲೆಯ ಭೀತಿ ಕಂಡಬರುತ್ತಿದ್ದು ಎಲ್ಲಾ ರಾಜ್ಯಗಳು ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರಕಾರ ಕರೆ ನೀಡಿದೆ.
ಇದೀಗ ಕೋವಿಡ್ ನಾಲ್ಕನೇ ಅಲೆಯಿಂದ ಪಾರಾಗಲು ಕೋವಿಡ್ ಲಸಿಕೆಯ ಮೂರನೇ ಡೋಸ್ ಹಾಕಿಕೊಳ್ಳಿ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸಲಹೆ ನೀಡಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು ನಾಳೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಲಿದ್ದು ಬಳಿಕ ರಾಜ್ಯಗಳ ಸ್ಥಿತಿಗತಿ ಬಗ್ಗೆ ಅವಲೋಕನೆ ಮಾಡುತ್ತಾರೆ.
ಕೊರೊನಾ 4 ನೇ ಅಲೆ ತಡೆಯುವುದರ ಬಗ್ಗೆ ಸಲಹೆಯನ್ನೂ ನೀಡಲಿದ್ದಾರೆ ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಲಸಿಕಾ ಅಭಿಯಾನದಿಂದ 3 ನೇ ಅಲೆಯಲ್ಲಿ ಹೆಚ್ಚು ಸಾವು ನೋವು ಉಂಟಾಗಿರಲಿಲ್ಲ . ಈವರೆಗೆ ರಾಜ್ಯದಲ್ಲಿ 10 ಕೋಟಿ ಲಸಿಕೆ ನೀಡಲಾಗಿದೆ ಎಂದರು.
ಲಸಿಕೆಯ ಎರಡು ಡೋಸನ್ನು ಕಡ್ಡಾಯವಾಗಿ ಪಡೆಯಬೇಕು. 3 ನೇ ಡೋಸ್ 55 % ಮಾತ್ರ ಆಗಿದೆ . ಕೂಡಲೇ ಜನರು 3 ನೇ ಡೋಸ್ ತೆಗೆದುಕೊಳ್ಳಿ , ನಾಲ್ಕನೇ ಅಲೆಗೆ ಕಾಯಬೇಡಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಕೋವಿಡ್ ತಡೆಯಲು ಮಾಸ್ ಕಡ್ಡಾಯವಾಗಿ ಹಾಕಿ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಜನತೆಯಲ್ಲಿ ವಿನಂತಿಕೊಂಡಿದ್ದಾರೆ.