dtvkannada

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಶಾಂತಿ ಕದಡುವ ಸಂದೇಶ ರವಾನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗೃಹರಕ್ಷಕದಳದ ಸಿಬ್ಬಂದಿಯೊಬ್ಬರನ್ನು ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಗೃಹರಕ್ಷಕ ಇಲಾಖೆ ಅಮಾನತು ಮಾಡಿದ ಘಟನೆ ನಡೆದಿದೆ.

ಪುತ್ತೂರು ಆರ್‌ಟಿಒದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿ ಸಲಾವುದ್ದೀನ್ ನೌಶಾದ್ ಎಂಬವರನ್ನು ಅಮಾನತುಗೊಂಡವರು. ಪುತ್ತೂರಿನ ಸಾಲ್ಮರ ನಿವಾಸಿಯಾಗಿದ್ದ ಸಲಾಮ್ಮುದ್ದೀನ್ ನೌಷದ್ ಎಂಬವರು ಕಟೀಲು ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ತೂಟೆದಾರ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಬಗ್ಗೆ ದೂರು ಬಂದಿತ್ತು.

ಘಚನೆ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಗೃಹರಕ್ಷಕದಳದ ಕಮಾಡೆಂಡ್ ಡಾ. ಮುರಳೀಧರ ಚೂಂತಾರು ಅವರ ಗಮನಕ್ಕೆ ತಂದಿದ್ದು, ಅವರು ಸಲಾವುದ್ದೀನ್ ನೌಶಾದ್ ಅವರನ್ನು ಅಮಾನತಿನಲ್ಲಿಟ್ಟು ಆತನ ಬಗ್ಗೆ ತನಿಖೆಗಾಗಿ ಆದೇಶಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!