ಕಲ್ಲಿಕೋಟೆ: ಕಳೆದ ಎರಡು ವರ್ಷಗಳಿಂದ ಆಧ್ಯಾತ್ಮಿಕ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ “ಮದನಿಯಂ” ಆಧ್ಯಾತ್ಮಿಕ ಮಜ್ಲೀಸ್ ನಿಂದ ಮರ್ಕಝ್ ವಿದ್ಯಾ ಸಂಸ್ಥೆಗೆ ಈದ್ ಹಬ್ಬದ ಪ್ರಯುಕ್ತ ಮದನಿಯಂ ಕುಟುಂಬದಿಂದ ಒಂದು ಕೋಟಿ ರೂಗಳನ್ನು ಇಂದು ಶುಕ್ರವಾರ ಜುಮಾ ನಮಾಜಿನ ಬಳಿಕ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಮದನಿಯಂ ಮಜ್ಲೀಸ್ ರುವಾರಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹಸ್ತಾಂತರಿಸಲಿದ್ದಾರೆ.
ಅನಿಸ್ಲಾಮಿಕ ರಂಗದಲ್ಲಿ ಹೆಜ್ಜೆ ಹಾಕುತ್ತಿದ್ದ ಯುವ ಸಮೂಹವನ್ನು ಆಧ್ಯಾತ್ಮಿಕದತ್ತ ಹೆಜ್ಜೆ ಹಾಕಿಸಿದ ಲಕ್ಷಾಂತರ ಮಂದಿಗಳು ಬಾಗವಹಿಸುವ ಅತೀ ದೊಡ್ಡ ಮಜ್ಲೀಸ್ ಆಗಿದೆ ಮದನಿಯಂ.
ಇದೀಗಾಗಲೇ ಸಾದಾತ್ ಭವನ ಎಂಬ ಹೊಸ ಪದ್ಧತಿಯೊಂದಿಗೆ ನೂರು ಸಾದಾತ್ ಗಳಿಗೆ ಆಶ್ರಯಿಸಲು ಒಂದು ಮನೆ ಎಂಬಂತೆ ಹೊಸ ಯೋಜನೆಯ ಮಧ್ಯೆ ಇದೀಗ ಸಾವಿರಾರು ಮಂದಿ ವಿದ್ಯಾರ್ಜನೆ ಗೈಯುತ್ತಿರುವ ಮರ್ಕಝ್ ಸಂಸ್ಥೆಗೆ ಈದ್ ಹಬ್ಬದ ಪ್ರಯುಕ್ತ ಒಂದು ಕೋಟಿ ರೂಗಳು ನೀಡಲು ಮುಂದಾಗಿದ್ದು,
ಮದನಿಯಂ ಕುಟುಂಬ ಬಹಳ ಉತ್ಸಾಹದಿಂದ ಆ ವೆಚ್ಚವನ್ನು ಬರಿಸಿದ್ದಾರೆ.
ಇಂದು ಜುಮ್ಮಾ ನಮಾಜಿನ ಬಳಿಕ ಎ.ಪಿ ಉಸ್ತಾದರಿಗೆ ಮದನಿಯಂ ಲತೀಫ್ ಸಖಾಫಿ ಮರ್ಕಝ್ ಮಸೀದಿ ಕಾರಂದೂರುನಲ್ಲಿ ಹಸ್ತಾಂತರಿಸಲಿದ್ದಾರೆ.