ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಜಮಾಅತ್ ವ್ಯಾಪ್ತಿಯ ಅರ್ಹ 25 ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.
ಮುಬಶ್ಶಿರ್ ಸೂರಿಕುಮೇರು ಅಧ್ಯಕ್ಷತೆಯಲ್ಲಿ, ಸಅದಿಯಾ ವಿದ್ಯಾರ್ಥಿ ಇಸಾಕ್ ಮಾಣಿ ದುಆ ಮಾಡಿದರು. ಎಸ್‌ವೈಎಸ್ ಮಾಣಿ ಸೆಂಟರ್ ನಾಯಕ ಯೂಸುಫ್ ಹಾಜಿ ಸೂರಿಕುಮೇರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕರ್ತರಾದ ಇಮ್ರಾನ್ ಸೂರಿಕುಮೇರು, ಮುಈನ್ ಸೂರಿಕುಮೇರು, ಸವಾದ್ ಮಾಣಿ, ಅಜ್ಮಲ್ ಮಾಣಿ ಉಪಸ್ಥಿತರಿದ್ದರು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.