ಉಪ್ಪಿನಂಗಡಿ: ತಾನು ಒಂದೂವರೆ ವರ್ಷಗಳಿಂದ ಸಾಕುತ್ತಿದ್ದ ಹಸುವಿನ ಕರುವೊಂದನ್ನು ಸಂಜೆ ಮೇವು ಮುಗಿಸಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಭೂಲೋರೋ ಮತ್ತು ಕಾರೊಂದರಲ್ಲಿ ಬಂದ ಹತ್ತರಷ್ಟು ಬಜರಂಗದಳದ ಕಾರ್ಯಕರ್ತರು ಮಹಿಳೆಯೊಬ್ಬಳನ್ನು ಅಡ್ಡಗಟ್ಟಿ ಮಾಂಗಲ್ಯ ಎಳೆದು ಮಹಿಳೆ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಲ್ಯಾಡಿಯ ಪೆರಿಯಶಾಂತಿ ಎಂಬಲ್ಲಿ ನಡೆದಿದೆ.
ಕರುವಿನ ಮೇವು ಮುಗಿಸಿ ತನ್ನ ಕೆಲಸದವನವೊಂದಿಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಈ ಘಟನೆ ನಡೆದಿದೆ.
ಎರಡು ಕಾರುಗಳಲ್ಲಿ ಬಂದ ಕೊಕ್ಕಡದ ಬಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಕೆಲಸದವನ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ಮಹಿಳೆಯ ಮಾಂಗಲ್ಯ ಮತ್ತು ವಸ್ತ್ರವನ್ನು ಎಳೆದು ಮಾನ ಭಂಗ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಇದೀಗ ಮಹಿಳೆ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಘಟನೆ ಬಗ್ಗೆ ಕೇಸು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.
ನಮ್ಮಂತವರು ಇಂತಹ ಪುಡಾರಿಗಳ ಉಪಟಳಗಳಿಂದ ಮಧ್ಯೆ ಜೀವಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಮಹಿಳೆಯ ಕತ್ತಿಗೆ ಕೈ ಹಾಕಿ ಮಾನಭಂಗ ಹಾಗೂ ಹಲ್ಲೆ ನಡೆಸಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆ ಸಂಬಂಧಿಸಿ ಮಹಿಳೆ ನೆಲ್ಯಾಡಿ ಠಾಣೆ ಮೆಟ್ಟಿಲೇರಿದ್ದು ಆದರೆ ಘಟನೆ ನಡೆದು ಇಪ್ಪತ್ತ ನಾಲ್ಕು ಗಂಟೆಗಳಾದರು ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.