ಚಾಮರಾಜನಗರ: ಚಿಕಿತ್ಸೆಗೆಂದು ಹೋಗಿದ್ದ ಪತ್ನಿಯನ್ನು ನಕಲಿ ಬಾಬಾನೊಬ್ಬ ಪಟಾಯಿಸಿದ್ದರಿಂದ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜ ನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ಘಟನೆಯಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮಹಮದ್ ಅಫ್ಘಾನ್ ಎಂದು ತಿಳಿದು ಬಂದಿದೆ.
ಮೈಸೂರಿನ ಬಾಬಾ ಖುರ್ರಾಂ ಪಾಷಾ ಎಂಬ ನಕಲಿ ಬಾಬಾನ ಬಳಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಾಗ ಚಿಕಿತ್ಸೆ ನೆಪದಲ್ಲಿ ಅಫ್ಘಾನ್ ಪತ್ನಿ ತಾನ್ಜೇನಿಯಾ ಕೌಸರ್‌ಳನ್ನು ಖುರ್ರಾಂ ಪಾಷಾ ತನ್ನ ಬಲೆಗೆ ಬೀಳಿಸಿಕೊಂಡಿದ್ದನಂತೆ.
ಇದರಿಂದ ಮನನೊಂದ ಪತಿ ನಿನ್ನೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಘಟನೆ ಬಗ್ಗೆ ಗುಂಡ್ಲುಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.