ಬೆಂಗಳೂರು: ಪ್ರಿಯಕರನ ಜೊತೆ ರೊಮ್ಯಾನ್ಸ್ ಮಾಡಲು ಅಡ್ಡಿಯಾಗುತ್ತಾನೆಂಬ ಕಾರಣಕ್ಕಾಗಿ ಹೆಂಡತಿ ತನ್ನ ಗಂಡನನ್ನೇ ಕೊಂದು ಜೈಲು ಸೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಂಕರ್ ರೆಡ್ಡಿ ತನ್ನ ಪತ್ನಿಯಿಂದಲೇ ಮೃತಪಟ್ಟ ದುರ್ದೈವಿ.
ಅಕೌಂಟೆಂಟ್ ಉದ್ಯೋಗಿ ಆಗಿದ್ದ ಶಂಕರ್ ರೆಡ್ಡಿ ತನ್ನ ಹೆಂಡತಿಯೊಂದಿಗೆ ಯಶವಂತಪುರದಲ್ಲಿ ವಾಸವಿದ್ದರು. ಆದರೆ ತನ್ನ ಪತ್ನಿಗೆ ಅಕ್ರಮ ಸಂಬಂಧವಿತ್ತು. ಪ್ರಿಯಕರನೊಂದಿಗೆ ಸಂಬಂಧ ಮುಂದುವರೆಸಲು ಪತಿ ಅಡ್ಡಿಯಾಗುತ್ತಿದ್ದ. ಈ ಕಾರಣಕ್ಕಾಗಿಯೇ ಗಂಡನನ್ನು ಮರ್ಡರ್ ಮಾಡಲು ಬಿಗ್ ಪ್ಲಾನ್ ಕೂಡಾ ಮಾಡಿದ್ದಳು.
ಈಕೆ ಗಂಡನನ್ನು ಕೊಂದು ಪಕ್ಕದಲ್ಲೇ ಮಲಗಿ ಸತ್ತು ಹೋದವಳಂತೆ ನಾಟಕ ಮಾಡಿದ್ದು ಕೊಲೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಡಿಲ್ಲಿರಾಣಿಯನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ತದನಂತರ ಆಕೆಯ ಪತಿ ಶಂಕರ್ ರೆಡ್ಡಿ ಸಾವಿನ ಬಗ್ಗೆ ತನಿಖೆದ ಮುಂದುವರೆಸಿದ ಪೊಲೀಸರು ಈಕೆಯನ್ನು ವಿಚಾರಿಸಿದಾಗ “ಯಾರೋ ದುಷ್ಕರ್ಮಿಗಳು ಮನೆಗೆ ಬಂದು ದರೋಡೆ ಮಾಡಿ ನನ್ನ ಗಂಡನನ್ನು ಕೊಂದು ಹಾಕಿದ್ದಾರೆ. ಜೊತೆಗೆ ನನ್ನ ಚಿನ್ನದ ಸರವನ್ನು ಕೂಡ ಎಗರಿಸಿಕೊಂಡು ಓಡಿದ್ದಾರೆ” ಎಂದು ಕಥೆ ಕಟ್ಟಿದ್ದಾಳೆ.
ಆದರೆ ಡಿಲ್ಲಿ ರಾಣಿಯ ದೇಹದ ಮೇಲೆ ಯಾವುದೇ ಗಾಯವಾಗದ ಕಾರಣ ಅನುಮಾನಗೊಂಡ ಪೊಲೀಸರು ಶ್ವಾನದಳವನ್ನು ಕರೆತಂದು ತನಿಖೆ ನಡೆಸಿದರು. ಆದರೆ ಶ್ವಾನಗಳು ಘಟನಾ ಸ್ಥಳದಿಂದ ಅ್ಯಂಬುಲೆನ್ಸ್ ಬಂದಿದ್ದ ಸ್ಥಳದವರೆಗೂ ಮಾತ್ರ ಹಿಂಬಾಲಿಸಿದ್ದವು.
ಇನ್ನೂ ಸಂಶಯಗೊಂಡ ಪೊಲೀಸರು ಡಿಲ್ಲಿರಾಣಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಿಯಕರನೊಂದಿಗೆ ಸಂಬಂಧ ಮುಂದುವರೆಸಲು ಪತಿ ಅಡ್ಡ ಬರುತ್ತಿದ್ದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.
ಆರೋಪಿ ಡಿಲ್ಲಿರಾಣಿ ಪತಿ ಶಂಕರ್ ರೆಡ್ಡಿಯನ್ನು ಕತ್ತು ಕೊಯ್ದು ಕೊಲೆ ಮಾಡಿ ನಂತರ ತನ್ನ ಪ್ರಿಯಕರನಿಗೆ ಕಾಲ್ ಮಾಡಿ ಕಥೆ ಮುಗೀತು ಅಂತ ಹೇಳಿದ್ದಾಳೆ. ಡೌಟ್ ಬಾರದಿರಲು ಆತನ ನಂಬರ್ ಡಿಲೀಟ್ ಮಾಡಿದ್ದಾಳೆ.
ಅಲ್ಲದೆ ವಿಚಾರಣೆಯಲ್ಲಿ ತನ್ನ ಚಿನ್ನದ ಸರವನ್ನು ತನ್ನ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿರುವುದಾಗಿ ಬಾಯಿ ಬಿಟ್ಟಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.