';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ನೆಲ್ಯಾಡಿ,ಎಪ್ರಿಲ್ 02:- ಕಳೆದ ರಾತ್ರಿ ಅಂಗಡಿ ಬಂದ್ ಮಾಡಿ ತಾನು ಸಾಕುತ್ತಿದ್ದ ಕರುವಿನೊಂದಿಗೆ ತೆರಳುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರಾದ ಕೊಕ್ಕಡ ಮೂಲದ ಮಹೇಶ್ ಹಾಗೂ ಆತನ ಸಂಗಡಿಗರು ಅಡ್ಡಗಟ್ಟಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರವನ್ನು ಕಿತ್ತು ಮಾನಭಂಗಕ್ಕೆ ಯತ್ನಿಸಿದಲ್ಲದೆ ಜೊತೆಗಿದ್ದ ಅವರ ಕೆಲಸಗಾರನ ಮೇಲೂ ಹಲ್ಲೆ ನಡೆಸಿದ ಪ್ರಕರಣ ನೆಲ್ಯಾಡಿಯ ಪೆರಿಯಶಾಂತಿಯಲ್ಲಿ ನಡೆದಿದ್ದು,
ಈ ವಿಚಾರವನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸಿದ್ದು, ಎಸ್‌ಡಿಪಿಐ ಕಡಬ ಬ್ಲಾಕ್ ನೇತೃತ್ವದ ನಾಯಕರ ನಿಯೋಗವು ಸಂತ್ರಸ್ತೆಯ ಆಸ್ಪತ್ರೆಯಲ್ಲಿ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ಉಪಾಧ್ಯಕ್ಷರು ವಿಕ್ಟರ್ ಮಾರ್ಟಿಸ್, ಕಡಬ ಬ್ಲಾಕ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ನಬಿಶಾನ್, ನೆಲ್ಯಾಡಿ ಗ್ರಾಮ ಸಮಿತಿ ಸದಸ್ಯರಾದ ಸಮದ್ ಹಾಗೂ ಕೌಕ್ರಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಹಸನಬ್ಬ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.