dtvkannada

ಪುತ್ತೂರು: ಕಳೆದ ಬುಧವಾರ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಹಾಶಿರ್ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಮೃತ ಪಾರ್ಥಿವ ಶರೀರವವನ್ನು ಮಂಗಳೂರಿನ ಯೇನಪೋಯ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುತ್ತಾರ್ ಮದನಿನಗರ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಿರ್ವಹಿಸಿ ರಾತ್ರಿ ಸುಮಾರು 10:00 ಗಂಟೆಗೆ ಯುವಕನ ಮನೆ ಸಂಟ್ಯಾರ್’ಗೆ ತಲುಪಲಿದೆ.

ಅಂತಿಮ ದರ್ಶನಕ್ಕೆ ಆಗಮಿಸುವವರ ಗಮನಕ್ಕೆ:-
ಮಹಮ್ಮದ್ ಹಾಶಿರ್ ಮಯ್ಯತ್ತ್ ಪರಿಪಾಲನೆ ಕಾರ್ಯ ಮಂಗಳೂರಿನಲ್ಲಿ ನಡೆಸಿ ರಾತ್ರಿ 10:00ಗಂಟೆಗೆ ಅವರ ಮನೆಗೆ ತಲುಪಲಿದೆ. ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ ಸ್ತ್ರೀಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದವರು ಮನೆಯಿಂದ ಸಂಟ್ಯಾರು ಮಸೀದಿಗೆ ತಲುಪಿದ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10:30 -11:00 ಗಂಟೆಯ ಒಳಗಾಗಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!