ಮಂಗಳೂರು: ಇತ್ತೀಚೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದರು. ಈ ವೇಳೆ ಪೊಲೀಸ್ ಕಮೀಷನರ್ ಮುತಾಲಿಕ್‌ಗೆ ರಾಜಾಥಿತ್ಯ ನೀಡಿದ್ದರು ಎಂದು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಅದಕ್ಕೆ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಂಗಳೂರು ಭೇಟಿಯ ವೇಳೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಇತ್ತೀಚೆಗೆ ಸುದ್ದಿಯಾಗಿದ್ದ ಮಳಲಿ ಮಸೀದಿಗೆ ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಮತ್ತು ಸಹಚರರು ಭೇಟಿ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದಕ್ಕಾಗಿ ಸಂಘರ್ಷ ಉಂಟಾಗಬಾರದೆಂದು ಪೊಲೀಸರು ಫಾಲೋಅಪ್ ಮಾಡುತ್ತಿದ್ದರು.
ಈ ಮಧ್ಯೆ ಕಮೀಷನರ್ ಆಫೀಸ್‌ಗೆ ಮಧ್ಯಾಹ್ನದ ವೇಳೆಗೆ ಮುತಾಲಿಕ್ ಭೇಟಿ ನೀಡಿದ್ದಾರೆ. ಹಾಗೂ ಮಸೀದಿಗೆ ಭೇಟಿ ನೀಡಲು ಅವಕಾಶ ಕೇಳಿದಾಗ ನಾನು ಅನುಮತಿ ನಿರಾಕರಿಸಿದ್ದೇನೆ.
ಭೇಟಿ ಮುಗಿದ ನಂತರ ಎಂದಿನಂತೆ ಊಟಕ್ಕೆ ಹೊರಡಲು ತಯಾರಾದಾಗ ತೆಗೆದ ಫೋಟೋವನ್ನಿಟ್ಟುಕೊಂಡು ನಿರ್ದಿಷ್ಟ ಕೆಲ ಸಂಘಟನೆ ಮತ್ತು ಪಕ್ಷಕ್ಕೆ ಸೇರಿದವರು ವೈರಲ್ ಮಾಡಿದ್ದಾರೆ.
ಆದರೆ ಒಂದು ಸಾಂಧರ್ಬಿಕ ಚಿತ್ರವನ್ನು ತಪ್ಪಾಗಿ ಬಿಂಬಿಸಿರುವುದು ಸರಿಯಲ್ಲ. ಯಾರು ಇದನ್ನು ವೈರಲ್ ಮಾಡಿದ್ದಾರೋ ಅವರ ಪಕ್ಷದ ಪ್ರತಿನಿಧಿಗಳ ಮೇಲೂ ಸಾಕಷ್ಟು ಪ್ರಕರಣ ಇದ್ದರೂ ಪಕ್ಷದ ನೆಲೆಯಲ್ಲಿ ಗುರುತಿಸುವ ವೇಳೆ ಅವರಿಗೆ ಗೌರವ ಕೊಟ್ಟಿದ್ದೇವೆ. ಆದ್ದರಿಂದ ಸಾಂಧರ್ಬಿಕ ಚಿತ್ರವನ್ನು ತಪ್ಪಾಗಿ ಬಿಂಬಿಸಿರುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.