dtvkannada

ಮಂಗಳೂರು: ಹಣದ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆಯಾಗಿ ಮನೆಬಿಟ್ಟು ಹೋದ ಹೆಂಡತಿ ನಾಪತ್ತೆಯಾದ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಗೀತಾ (36) ಎಂದು ಗುರುತಿಸಲಾಗಿದೆ.
ಶಶಿಧರ ಎಂಬುವರು ಮಂಗಳೂರಿಗೆ ಕೂಲಿ ಕೆಲಸಕ್ಕೆಂದು 4 ತಿಂಗಳ ಹಿಂದೆ ತನ್ನ ಪತ್ನಿ ಗೀತಾ ಎಂಬುವರೊಂದಿಗೆ ಬಂದು ಎನ್ ಕ್ಲೇವ್ ಮಠದಕಣಿ ಕ್ರಾಸ್ ರಸ್ತೆ ಗಾಂಧಿನಗರ ನಿಶಾಂತ್ ಶೇಟ್ ಎಂಬುವರ ಮನೆಯಲ್ಲಿ ವಾಸವಾಗಿದ್ದರು.

ಮೇ.07 ರಂದು ಬೆಳಿಗ್ಗೆ 7 ಗಂಟೆ ಗಂಡ-ಹೆಂಡತಿ ಮಧ್ಯೆ ಹಣದ ವಿಚಾರದಲ್ಲಿ ಗಲಾಟೆ ಆಗಿದೆ.
ಇದರಿಂದ ಸಿಟ್ಟಿಗೆದ್ದ ಹೆಂಡತಿ ಕೋಪಗೊಂಡು ಮನೆ ಬಿಟ್ಟು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ, ಊರಿಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ವಿವರ
ಗೀತಾ (36) ವರ್ಷ, ಎತ್ತರ: 5 ಅಡಿ, ಕನ್ನಡ ಭಾಷೆ ಮಾತನಾಡುತ್ತಾರೆ. ಗೋಧಿ ಮೈಬಣ್ಣ, ದುಂಡು ಮುಖ, ದಪ್ಪ ಶರೀರ, ಬೂದು ಬಣ್ಣದ ಸೀರೆ ಧರಿಸಿದ್ದಾರೆ. ಇವರು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!