dtvkannada

'; } else { echo "Sorry! You are Blocked from seeing the Ads"; } ?>

ಮಂಡ್ಯ: ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಗೆ ನೂರಾರು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಸುತ್ತುವರಿದು ದಾಳಿ ಮಾಡಲು ಮುಂದಾಗಿದ್ದ ವೇಳೆ ವಿದ್ಯಾರ್ಥಿನಿ ‘ಅಲ್ಲಾಹು ಅಕ್ಬರ್’ ಎಂದು ಘೋಷನೆ ಕೂಗಿದ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವಿದ್ಯಾರ್ಥಿನಿ ಮುಸ್ಕಾನ್ ಭಾರೀ ಸುದ್ದಿಯಾಗಿದ್ದರು.

ಇದೀಗ ಕನ್ನಡದ ಕೆಲವೊಂದು ಸುದ್ದಿ ಚಾನೆಲ್ ಗಳು ವಿದ್ಯಾರ್ಥಿನಿಗೆ ಸಂಬಂಧವೇ ಇಲ್ಲದ ವರದಿಗಳನ್ನು ಪ್ರಕಟಿಸುತ್ತಿದ್ದು, ವಿದ್ಯಾರ್ಥಿನಿಯನ್ನು ಪ್ರಕರಣವೊಂದರ ಆರೋಪಿ ಎಂಬಂತೆ ಬಿಂಬಿಸುತ್ತಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ವಿದ್ಯಾರ್ಥಿನಿ ಮುಸ್ಕಾನ್ ಗೆ ಪೊಲೀಸರೊಂದಿಗೆ ಅನುಮತಿ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ” ಎಂದು ಮಂಡ್ಯ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಯತೀಶ್ ಎ.ನ್ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಮುಸ್ಕಾನ್ ತನ್ನ ಕುಟುಂಬದ ಜತೆ ಸೌದಿಗೆ ಎಪ್ರಿಲ್ 25ರಂದು ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡ ಕೆಲವೊಂದು ಮಾದ್ಯಮಗಳು ಸುಳ್ಳು ಸುದ್ದಿಗಳನ್ನು ವರದಿ ಮಾಡುತ್ತಿವೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ Gladson Almeida ಎನ್ನುವವರು ಬರೆದಿದ್ದಾರೆ:- ಆಕೆ ಪೋಲೀಸರನ್ನು ಯಾಮಾರಿಸಿ ಹೋಗಿದ್ದಾಳೆ, ಉಗ್ರರ ಭೇಟಿಯ ಸಂಚು! ಮೈ ಫುಟ್! ಮುಸ್ಲೀಮ್ ದ್ವೇಷ ಈ ನೆಲಕ್ಕೆ ಹೊಸತಲ್ಲ. ಆದರೆ ಅದರ ಪರಿಧಿಗಳು ದಿನೇದಿನೇ ವಿಸ್ತಾರಗೊಳ್ಳುತ್ತಿವೆ. ಇವರ ಮೇಲೆ ಪ್ರಕರಣ ದಾಖಲಿಸಿ, ಎಫ್‍ಐಆರ್ ಆದರೂ ಅವರಿಗೇನೂ ಆಗಲ್ಲ. ಅವರ ಬಂಧನವೂ ಆಗಲ್ಲ. ತೀರಾ ಇತ್ತೀಚಿಗೆಯಷ್ಟೆ ಕರಾವಳಿಯಲ್ಲಿ ಕೊರಗಜ್ಜನ ವೇಷ ಧರಿಸಿದ್ದಾನೆ ಎನ್ನುವ ನೆಪ ಹೂಡಿ ಓರ್ವ ಮುಸ್ಲೀಮ್ ಯುವಕನ ಮೇಲೆ ಕೇಸ್ ದಾಖಲಾಯಿತು, ಆತನ ಬಂಧನವೂ ಆಯಿತು. ಅದೂ ಕೊರಗಜ್ಜನ ಸಮುದಾಯದವರೇ ಆತ ಧರಿಸಿದ್ದು ಕೊರಗಜ್ಜನ ವೇಷವೇ ಅಲ್ಲ, ಅದರಿಂದ ಕೊರಗಜ್ಜರಿಗೆ ಯಾವುದೇ ಅವಮಾನ ಆಗಿಲ್ಲವೆಂದು ಪತ್ರಿಕಾಗೋಶ್ಟಿಯಲ್ಲಿ ಹೇಳಿದ ನಂತರವೂ. ಆದರೆ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲೀಮರ ಸಾಮೂಹಿಕ ಕಗ್ಗೊಲೆಗೆ ಕರೆಕೊಟ್ಟವನ ವಿರುದ್ಧ ಎಫ್‍ಐಆರ್ ಆದರೂ ಆತನ ಬಂಧನವೂ ಆಗಿಲ್ಲ, ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಮತ್ತೆ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಂತೆ!

'; } else { echo "Sorry! You are Blocked from seeing the Ads"; } ?>

ಆಕೆ ಪೋಲೀಸರನ್ನು ಯಾಮಾರಿಸಿ ಹೋಗಿರುವುದೆಂದರೆ, ದುಬಾಯಿಯಿಂದ ಪೆಟ್ರೋಲ್ ಕಳುಹಿಸಿ, ನಮ್ಮಲ್ಲಿಂದ ನೀರು ಕಳುಹಿಸಲು ಮೋದಿ ಮಹಾತ್ಮೆಯಡಿ ಕೊರೆದಿರುವ ಸಮುದ್ರ ಸುರಂಗದಿಂದ ಆಕೆ ಹಾಗೂ ಆಕೆಯ ಕುಟುಂಬ ಓಡಿ ಹೋಗಿದ್ದಾರಾ ಸೌದಿಗೆ ಇಲ್ಲ ಚಾರ್ಟರ್ ಫ್ಲೈಟಲ್ಲಿ ಹೋಗಿದ್ದಾರಾ?

ಅಲ್ಲ ಆಕೆ ಉಮ್ರಾಗಲ್ಲ ಬೇಕಾದ್ರೆ ವಿದೇಶಿ ಟೂರ್ ಗೇ ಹೋಗಲಿ. ಏನೀವಾಗ? ಆಕೆಯ ಮೇಲೆ ಕೇಸುಂಟಾ? ಕೋರ್ಟ್ ಆಕೆ ದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ನಿರ್ಭಂದ ಹೇರಿದೆಯಾ? ಸ್ಥಳೀಯ ಪೋಲೀಸರು ಆಕೆ ಮೇಲೆ FIR ದಾಖಲಿಸಿದ್ದಾರಾ? ಆಕೆ ಯಾವ ತಪ್ಪು ಮಾಡಿದ್ದಾಳೆ? ಬೇಟೆನಾಯಿಗಳು ಆಕೆಯನ್ನು ಸುತ್ತುವರಿದು ದಾಳಿ ಮಾಡಲು ಹವಣಿಸುತ್ತಿದ್ದಾಗ ಆಕೆ ಅಲ್ಲಾಹೂ ಅಕ್ಬರೆ ಅಂದಿದ್ದಾಳಷ್ಟೆ. ತಪ್ಪೇನಿದೆ ಅದರಲ್ಲಿ? ಜೈ ಶ್ರೀರಾಮ್‍ಗೂ, ಅಲ್ಲಾಹೂ ಅಕ್ಬರಿಗೂ ವ್ಯತ್ಯಾಸವೇನಿದೆ? ಎಂದು Gladson Almeida ಎಂಬವರು ತಮ್ಮ ಪೇಸ್ಬುಕ್ ಪೇಜ್’ನಲ್ಲಿ ಹಂಚಿಕೊಂಡಿದ್ದಾರೆ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!