dtvkannada

ಬಂಟ್ವಾಳ: ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ಭತ್ತದ ಫಸಲಿನಲ್ಲಿ ಪಾಲು ಕೇಳಿದ ಕಾರಣಕ್ಕೆ ಸಹೋದರರ ಮಧ್ಯೆ ಜಗಳ ನಡೆದು ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ವಿಟ್ದ ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಐತಪ್ಪ ನಾಯ್ಕ್(45) ಎಂದು ತಿಳಿದು ಬಂದಿದೆ.

ಎಣ್ಮಕಜೆ ಗ್ರಾಮದ ಅಡ್ಯನಡ್ಕ ನಿವಾಸಿ ಬಾಲಪ್ಪ ನಾಯ್ಕ್ ಅವರು ಮಂಗಳವಾರ ಸಂಜೆ ತರವಾಡು ಮನೆಗೆ ತನ್ನ ತಾಯಿ ಜತೆ ಬಂದಿದ್ದರು. ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ ತಮ್ಮ ಜಾಗದಲ್ಲಿ ಬೆಳೆದ ಭತ್ತ ಫಸಲಿನಲ್ಲಿ ಪಾಲು ಕೇಳಿದ ವಿಚಾರವಾಗಿ ಸಹೋದರರಿಬ್ಬರ ನಡುವೆ ಜಗಳ ಉಂಟಾಗಿದೆ.

ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ ಸೋನಾವರ ಐಪಿಎಸ್ ಮತ್ತು ಅಡಿಷನಲ್ ಎಸ್‌ಪಿ ಕುಮಾರಚಂದ್ರ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ IPS ರವರುಗಳ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್‌.ಈ ನೇತೃತ್ವದಲ್ಲಿ

ಪಿ ಎಸ್ ಐ ಮಂಜುನಾಥ ಟಿ, Pro.ಪಿ ಎಸ್ ಐ ಗಳಾದ ಧನಂಜಯ, ಬಿ.ಸಿ, ಜಯಶ್ರೀ ಪ್ರಭಾಕರ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆಯೆಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!