ಕೊಡಗು: ಶಾಲೆಯೊಂದರಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡುತ್ತಿದ್ದು ಇವರ ಭಯೋತ್ಪಾದನೆ ಚಟುವಟಿಕೆಗೆ ಶಾಲೆಯೇ ಬೇಕೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಆದರೆ ಬಜರಂಗದಳದ ಕಾರ್ಯಕರ್ತರ ಈ ದೇಶ ದ್ರೋಹದ ತರಬೇತಿಗೆ ಬಿಜೆಪಿ ನಾಯಕರು ಸಮರ್ಥನೆ ನೀಡಿದ್ದಾರೆ.
ಮುಸಲ್ಮಾನರು ಬ್ಯಾಗ್ ನಲ್ಲಿ ಪಟಾಕಿ ಕೊಂಡು ಹೋದರೆ ಬಾಂಬ್ ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಇದೀಗ ಬಾಂಬ್, ಬಂದೂಕು ನಂತಹ ಸ್ಪೋಟಕಗಳ ತರಬೇತಿ ನೀಡುವ ಬಜರಂಗದಳದ ಈ ದೇಶ ದ್ರೋಹ ಚಟುವಟಿಕೆಯನ್ನು ಸಮರ್ಥಿಸುತ್ತಿರುವುದು ಕೇದಕರ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಹಾಗು ಜೆ.ಡಿ,ಎಸ್ ನ ಹಲವಾರು ಶಾಸಕರು ಬಂದೂಕು ತರಬೇತಿ ನೀಡುತ್ತಿರುವ ದೇಶ ದ್ರೋಹಿಗಳ ವಿರುದ್ಧ ದೇಶದ್ರೋಹದಡಿ ಕೇಸು ದಾಖಲಿಸಿ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.
ಶೂಲ ದೀಕ್ಷೆ ಹಾಗೂ ಏರ್‌ಗನ್ ತರಬೇತಿ ಸಮರ್ಥಿಸಿದ ಬಜರಂಗದಳ:
ಪೊನ್ನಂಪೇಟೆಯಲ್ಲಿ ನಡೆದ ಬಜರಂಗದಳದ ಪ್ರಶಿಕ್ಷಾ ವರ್ಗದಲ್ಲಿ ನೀಡಿದ ತ್ರಿಶೂಲ ದೀಕ್ಷೆ ಹಾಗೂ ಬಂದೂಕು ತರಬೇತಿಯನ್ನು ಬಜರಂಗದಳದ ಸಮರ್ಥಿಸಿಕೊಂಡಿದೆ.
ಕಾನೂನು ವ್ಯಾಪ್ತಿಯಲ್ಲೇ ಈ ತರಬೇತಿ ನಡೆದಿರೋದು.ಈ ಹಿಂದಿನಿಂದಲೂ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇದೇ ರೀತಿ ತರಬೇತಿ ನೀಡಲಾಗುತ್ತಿತ್ತು, ಹೀಗಾಗಿ ಇದರಲ್ಲಿ ಯಾವುದೇ ಕಾನೂನು ಬಾಹಿರ ಕೆಲಸಗಳಿಲ್ಲ ಎಂದು ಬಜರಂಗದಳದ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಹೇಳಿಕೆ ನೀಡಿದ್ದಾರೆ