dtvkannada

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಮಂಜಲಪಡ್ಪು ಸುದಾನ ಶಾಲೆಯ ಇಂಗ್ಲಿಷ್ ಮಿಡಿಯಂ ಪ್ರೌಢಶಾಲೆಯ ಅರ್ಪಿತಾ ಶೇಟ್.ಕೆ 625 ರಲ್ಲಿ 624 ಅಂಕ ಪಡೆದುಕೊಂಡು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅರ್ಪಿತಾ ಶೇಟ್ ಅವರು ಪ್ರಥಮ ಭಾಷೆ ಇಂಗ್ಲಿಷ್ 124 , ದ್ವಿತೀಯ ಭಾಷೆ ಕನ್ನಡದಲ್ಲಿ 100 , ತೃತೀಯ ಭಾಷೆ ಸಂಸ್ಕೃತದಲ್ಲಿ 100 , ಗಣಿತ -100 , ವಿಜ್ಞಾನ -100 , ಸಮಾಜ -100 ಅಂಕವನ್ನು ಪಡೆದುಕೊಂಡಿದ್ದಾರೆ.

ಈಕೆ ಪುತ್ತೂರಿನ ಹೆಸರಾಂತ ಶೇಟ್ ಇಲೆಕ್ಟ್ರಾನಿಕ್ಸ್ ಮಳಿಗೆಯ‌ ಮಾಲಕರಾದ ರೂಪೇಶ್ ಶೇಟ್ ಹಾಗೂ ಪಾಪೆಮಜಲ್ ಪ್ರೌಡ ಶಾಲೆಯ ಅಧ್ಯಾಪಕಿಯಾದ ವಿದೂಷಿ ಪವಿತ್ರಾ ರೂಪೇಶ್ ದಂಪತಿಯ ಪುತ್ರಿಯಾಗಿರುತ್ತಾಳೆ.

By dtv

Leave a Reply

Your email address will not be published. Required fields are marked *

error: Content is protected !!