dtvkannada

ಕೋಝಿಕ್ಕೋಡ್: ದುಬೈನಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದ ಕೇರಳದ ಜನಪ್ರಿಯ ವ್ಲಾಗರ್, ಮಲಯಾಲಂ ಆಲ್ಬಂ ನಟಿ ರಿಫಾ ಮೆಹ್ನು ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ.
ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಡಪಟ್ಟಿದೆ.

ರಿಫಾ ಅವರ ಕುತ್ತಿಗೆಯ ಮೇಲಿನ ಗಾಯದ ಗುರುತುಗಳು ನೇಣು ಬಿಗಿದ ಕಾರಣ ಎಂದು ವರದಿ ಸ್ಪಷ್ಟಪಡಿಸಿದೆ.

ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಡಾ.ಲೀಸಾ ಜಾನ್ ನೇತೃತ್ವದ ತಂಡವು ಸಂಗ್ರಹಿಸಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ಮಂಗಳವಾರ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. ಆದಾಗ್ಯೂ, ಆಂತರಿಕ ಅಂಗಗಳ ಪರೀಕ್ಷೆಯ ಫಲಿತಾಂಶಗಳು ಇನ್ನಷ್ಟೇ ಬರಬೇಕಾಗಿದೆ.

ಕೋಝಿಕ್ಕೋಡ್‌ನ ಕಾಕ್ಕೂರು ಮೂಲದ ರಿಫಾ ಮೆಹ್ನು ಮಾರ್ಚ್ 2 ರಂದು ದುಬೈನ ಕರಾಮದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಅಕಾಲಿಕ ಮರಣವು ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ದೊಡ್ಡ ಆಘಾತವನ್ನುಂಟು ಮಾಡಿತು.

ಈ ವರ್ಷದ ಆರಂಭದಲ್ಲಿ ರಿಫಾ(21) ತನ್ನ ಪತಿ, ವ್ಲಾಗರ್ ಮತ್ತು ಆಲ್ಬಂ ಕಲಾವಿದ ಮೆಹ್ನು (25) ಮತ್ತು ಅವರ ಮಗ ಅಫ್ಸಾನ್ ಅವರೊಂದಿಗೆ ಯುಎಇಗೆ ಆಗಮಿಸಿದ್ದರು. ಫೆಬ್ರವರಿ 28 ರಂದು, ದಂಪತಿಗಳು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಿಂದ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ವೀಡಿಯೊದಲ್ಲಿ, ದಂಪತಿಗಳು ಸಂತೋಷದಿಂದ ಮತ್ತು ಹರ್ಷಚಿತ್ತದಿಂದ ಕಾಣುತ್ತಿದ್ದರು. ಎರಡು ದಿನಗಳ ನಂತರ ಮೆಹನು ರಾತ್ರಿ 1:30ಕ್ಕೆ ರಾತ್ರಿ ಊಟ ಮುಗಿಸಿ ಮನೆಗೆ ಹಿಂದಿರುಗಿದಾಗ ರಿಫಾ ಮೃತದೇಹ ಸೀಲಿಂಗ್‌ನಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ.

ನಂತರದ ಬೆಳವಣಿಗೆಯಲ್ಲಿ ಮೃತದೇಹವನ್ನು ಊರಿಗೆ ತರಲಾಗುತ್ತದೆ. ದುಬೈನಿಂದ ತರಲಾದ ಶವವನ್ನು ಇಲ್ಲಿಯೇ ಸಮಾಧಿ ಮಾಡಲಾಗುತ್ತದೆ. ನಂತರ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತದೆ. ಇದು ಆತ್ಮಹತ್ಯೆ ಅಲ್ಲ ಎಂದು ಪೋಷಕರು ಆರೋಪಿಸುತ್ತಾರೆ.

ದುಬೈನಲ್ಲಿ ಶವಪರೀಕ್ಷೆ ನಡೆಸಲಾಗಿದೆ ಎಂಬ ಆಕೆಯ ಪತಿ ಮತ್ತು ಆತನ ಕುಟುಂಬದವರ ಹೇಳಿಕೆಗೆ ಆಕೆಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ರಿಫಾ ಸತ್ತ ಎರಡು ತಿಂಗಳ ನಂತರ ಶವವನ್ನು ಹೊರತೆಗೆದ ಕೇರಳ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಲು ಕಂದಾಯ ವಿಭಾಗೀಯ ಅಧಿಕಾರಿಯ ಅನುಮತಿ ಕೋರುತ್ತಾರೆ.

ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಕತ್ತಿನ ಮೇಲಿನ ಗುರುತು ಆತ್ಮಹತ್ಯೆಗೆ ಕಾರಣ ಎಂದು ವರದಿ ದೃಢಪಡಿಸಿದೆ. ಆಂತರಿಕ ಅಂಗಗಳ ರಾಸಾಯನಿಕ ವಿಶ್ಲೇಷಣೆಯ ವರದಿ ಇನ್ನಷ್ಟೇ ಬರಬೇಕಿದೆ.

ರಿಫಾ ಅವರ ಪತಿ ಕಾಸರಗೋಡು ಮೂಲದ ಮೆಹನಾಸ್ ವಿರುದ್ಧ ಪೊಲೀಸರು ಮಾನಸಿಕ ಮತ್ತು ದೈಹಿಕ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ರಿಫಾ ಕುಟುಂಬದವರ ಪ್ರಕಾರ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿಲ್ಲ. ರಿಫಾ ಮೃತಪಡುವ ಗಂಟೆಗಳ ಮೊದಲು, ಅವಳು ತನ್ನ ಕೆಲಸದ ಸ್ಥಳದಿಂದ ತನ್ನ ಎರಡು ವರ್ಷದ ಮಗನ ಜೊತೆಗೆ ತನ್ನ ಹೆತ್ತವರೊಂದಿಗೆ ವೀಡಿಯೊ ಚಾಟ್ ಮಾಡಿದ್ದಳು. ಮರುದಿನವೇ ಆಕೆಯ ಸಾವಿನ ಸುದ್ದಿ ಮನೆಯವರಿಗೆ ತಿಳಿಯಿತು. ಕುಟುಂಬವು ಆತ್ಮಹತ್ಯೆಗೆ ಪ್ರಚೋದನೆ ನೀಡಲು ಗಂಡನೇ ಕಾರಣ, ಈ ಪ್ರಕರಣವನ್ನು ನ್ಯಾಯ ಸಿಗುವ ವರೆಗೂ ಮುಂದುವರಿಸುತ್ತೇವೆ ಎಂದು ಅವರ ವಕೀಲರು ಹೇಳಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!