dtvkannada

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸುದಾನ ವಸತಿಯುತ ಶಾಲೆಯ ಹಷ ಆಯಿಷ 625 ರಲ್ಲಿ 613 ಅಂಕ ಪಡೆದುಕೊಂಡಿದ್ದಾರೆ.

ಹಷಾ ಆಯಿಷಾ ಅವರು ಪ್ರಥಮ ಭಾಷೆ ಇಂಗ್ಲಿಷ್’ನಲ್ಲಿ 123 , ದ್ವಿತೀಯ ಭಾಷೆ ಕನ್ನಡದಲ್ಲಿ 100 , ತೃತೀಯ ಭಾಷೆ ಹಿಂದಿ 100 , ಗಣಿತ -96 , ವಿಜ್ಞಾನ -94 ಹಾಗೂ ಸಮಾಜದಲ್ಲಿ 100 ಅಂಕವನ್ನು ಗಳಿಸಿ ಶೇ.98.08% ಅಂಕ ಪಡೆದುಕೊಂಡಿದ್ದಾರೆ.

ಇವರು ಇತ್ತೀಚೆಗೆ ನಡೆದ ಸಮಸ್ತ ಕೇರಳ ಇಸ್ಲಾಂ ವಿದ್ಯಾಭ್ಯಾಸ ಬೋರ್ಡ್ 10ನೇ ತರಗತಿ ಮದರಸ ಪರೀಕ್ಷೆಯಲ್ಲಿ 400/394 ಅಂಕಗಳೊಂದಿಗೆ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಇವರು ಹಯಾತುಲ್ ಇಸ್ಲಾಂ ಮದ್ರಸ ಪರ್ಲಡ್ಕದಲ್ಲಿ ಕಲಿತು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಟಾಪ್ ಪ್ಲಸ್ ಅಂಕಗಳೊಂದಿಗೆ ಉತ್ತಮ ಸಾಧನೆಗೈದು, ಕುಟುಂಬಕ್ಕೆ, ಊರಿಗೆ ಕೀರ್ತಿ ತಂದಿದ್ದರು.

ಇವರು ಪರ್ಲಡ್ಕ ನಿವಾಸಿ ಅಬ್ದುಲ್ ಹಮೀದ್ ಹಾಗೂ ಶಮೀಮಾ ದಂಪತಿಯ ಪುತ್ರಿಯಾಗಿರುತ್ತಾರೆ.

By dtv

Leave a Reply

Your email address will not be published. Required fields are marked *

error: Content is protected !!