ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು,
ಅಲ್-ಮುನವ್ವರ ಆಂಗ್ಲ ಮಾಧ್ಯಮ ಶಾಲೆ ಮೂಡಡ್ಕ ಇದರ ವಿದ್ಯಾರ್ಥಿನಿ ಬಿ.ಆಯಿಷತ್ ರಾಫಿಯ 546 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಉತ್ತಮ ಸಾಧನೆ ಮಾಡಿದ್ದಾಳೆ.

ಇವರು ಪ್ರಥಮ ಭಾಷೆ ಇಂಗ್ಲೀಷ್ ನಲ್ಲಿ 85, ಕನ್ನಡ 115, ಹಿಂದಿ 96, ಗಣಿತ 91, ವಿಜ್ಞಾನ 68 ಹಾಗೂ ಸಮಾಜದಲ್ಲಿ 91 ಅಂಕಗಳನ್ನು ಪಡೆದಿರುತ್ತಾಳೆ.

ಈಕೆ ತೆಕ್ಕಾರು ಬದಿಹಿತ್ಲು ಬಿ.ಅಬ್ದುಲ್ ರಝಾಕ್ ಮತ್ತು ಜಿ.ಅಸ್ಮಾ ದಂಪತಿಗಳ ಪುತ್ರಿ.