ಪುತ್ತೂರು: ಹಲವಾರು ರಾಜಕೀಯ ಪಕ್ಷಗಳ ಜನ ಪ್ರತಿನಿಧಿಗಳನ್ನು ನೀವು ನೋಡಿರಬಹುದು, ಆದರೆ ಇಲ್ಲೊಬ್ಬ ಎಸ್‌ಡಿಪಿಐ ಬೆಂಬಲಿತ ಬಡ ಕೂಲಿ ಕಾರ್ಮಿಕ ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ನಂತರ ನಿರಂತರವಾಗಿ ತನ್ನ ವಾರ್ಡ್‌ನಲ್ಲಿ ಸಾಮಾಜಿಕ ಕೆಲಸಗಳಲ್ಲಿ ಹಾಗೂ ಶ್ರಮದಾನ ಮಾಡುತ್ತ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಗಳನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯಿತ್ ಸದಸ್ಯ ನಾಗೇಶ್ ಕುರಿಯ ಅವರು ಕೇವಲ ಪಂಚಾಯತ್ ಸದಸ್ಯ ಎಂಬ ಹೆಸರಿಗಷ್ಟೆ ಸೀಮಿತವಾಗದೆ, ತನ್ನಲ್ಲಿ ಸಾಧ್ಯವಿರುವಷ್ಟು ಸಮಯಗಳನ್ನು ಊರಿನ ಅಭಿವೃದ್ಧಿಗೆ ಮೀಸಲಿಟ್ಟು ನಿರಂತರವಾಗಿ ಸಮಾಜಮುಖಿ ಕೆಲಸಗಲ್ಲಿ ತೊಡಗಿಸಿಕೊಂಡು ಇಡೀ ಊರಿನ ಜನರ ಮೆಚ್ಚುಗೆಗೆ ಪಾತ್ರರಾಗಿ ಮಾದರಿ ಜನಪ್ರತಿನಿಧಿಯಾಗಿ ಗುರುತಿಸಿ ಕೊಂಡಿದ್ದಾರೆ.
ಕುರಿಯ ಪಡುಪು ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ
ಹುಲ್ಲುಗಳು ಹಾಗೂ ಪೊದರುಗಳು ಬೆಳೆದಿದ್ದು ರೋಗಿಗಳಿಗೆ ಅರೋಗ್ಯ ಕೇಂದ್ರಕ್ಕೆ ಹೋಗಲು ತೊಂದರೆಯಾಗುತ್ತದ್ದುದನ್ನು ಮನಗಂಡ ನಾಗೇಶ್ ತನ್ನ ದೈನಂದಿನ ಕೆಲಸಕ್ಕೆ ರಜಾ ಮಾಡಿ ಶ್ರಮದಾನ ಮಾಡುವ ಮೂಲಕ ಜನರ ಸಮಸ್ಯೆಗಳನ್ನು ನೀಗಿಸಿದ್ದಾರೆ. ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಜಬ್ಬಾರ್ ಕೂಡ ಅವರಿಗೆ ಕೈಜೋಡಿಸಿದರು.