ಬೆಂಗಳೂರು: ಹಲವಾರು ರಾಷ್ಟ್ರ , ರಾಜ್ಯಗಳಲ್ಲಿ ತಲೆ ಎತ್ತಿ ನಿಂತಿರುವ ಲುಲು ಮಾಲ್ ಇದೀಗ ಕರ್ನಾಟಕದತ್ತ ಮುಖ ಮಾಡಿದ್ದು ರಾಜ್ಯದಲ್ಲಿ ಉದ್ಯೋಗವಿಲ್ಲದೆ ಹರಸಾಹಸ ಪಡುತ್ತಿದ್ದ ಯುವ ಜನಾಂಗಕ್ಕೆ ಈ ವಿಚಾರ ಖುಷಿ ತಂದಿದೆ.
ಹೌದು ಯೂಸೂಫ್ ಅಲಿ ಮಾಲಕತ್ವದ ಲುಲು ಗ್ರೂಪಿನ ಶಾಪಿಂಗ್ ಮಾಲ್ ಕರ್ನಾಟಕದಲ್ಲಿ ತೆರೆಯುವ ಸಲುವಾಗಿ ಸಿ.ಎಂ ಜೊತೆ ಮಾತುಕತೆ ನಡೆಸಿದ್ದು ಕೊನೆಗೆ ಇದರ ಒಪ್ಪಂದ ಪತ್ರಗಳಿಗೆ ಮುಖ್ಯಮಂತ್ರಿ ಸಹಿ ಹಾಕಿದ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದ ತನ್ನ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಸ್ವಿಟರ್ಲೆಂಡಿನ ದಾವೋಸ್ ನಲ್ಲಿ ನಡೆಯುವ ಸಮಾವೇಶದಲ್ಲಿ ಲುಲು ಗ್ರೂಪ್ ಇಂಟರ್ ನ್ಯಾಷನಲ್ ನ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಜೊತೆಗೆ ಲುಲು ಸಂಸ್ಥೆಯ ಮಾಲೀಕರಾದ ಯೂಸುಫ್ ಅಲಿ ಜೊತೆಗಿದ್ದರೂ ಅದರ ನಿರ್ದೇಶಕ ಅನಂತ ರಾವ್ ರವರ ಹೆಸರು ಅಷ್ಟೇ ನಮೂದಿಸಿದ್ದು ಇದೀಗ ಮುಖ್ಯಮಂತ್ರಿಗಳನ್ನು ನೆಟ್ಟಿಗರು ಕಾಲೆಳಿದಿದ್ದಾರೆ.
ಹಲವಾರು ಮಂದಿಗಳು ಈ ಪೊಷ್ಟೀಗೆ ಕಮೆಂಟ್ ಮಾಡಿದ್ದು, ಮುಖ್ಯಮಂತ್ರಿಗಳ ನೀಚ ರಾಜಕೀಯದ ಮುಖವನ್ನು ಅನಾವರಣಗೊಳಿಸಿದ್ದಾರೆ ಅಂದಿದ್ದಾರೆ.
https://m.facebook.com/story.php?story_fbid=380056864166761&id=100064873500665
ಮುಸಲ್ಮಾನರ ಕಂಪೆನಿಗಳು ಬೇಕು ಅವರ ಹೆಸರು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ಯಾರದೋ ಹಿತ ಕಾಪಾಡಲು ಹೋಗಿ ಮುಖ್ಯಮಂತ್ರಿಗಳು ಒಟ್ಟಾರೆಯಾಗಿ ಪೇಚಿಗೆ ಸಿಲುಕಿದ್ದಾರೆ “ಆದಷ್ಟು ಬೇಗ ಪೊಷ್ಟ್ ಡಿಲಿಟ್ ಮಾಡಿ ಮಾನ ಮರ್ಯಾದೆ ಉಳಿಸಿಕೊಳ್ಳಿ” ಎಂದು ನೆಟ್ಟಿಗರು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.