dtvkannada

ಮಂಗಳೂರು: ಇಂದು ನಡೆದ ತಾಂಬೂಲ ಪ್ರಶ್ನೆಯ ನಂತರ ಪತ್ರಿಕಾಗೊಷ್ಟಿಯಲ್ಲಿ ಮಾತಾಡಿದ ಶರಣ್ ಪಂಪ್ವೇಳ್ ಮಳಲಿ ಮಸೀದಿ ಕಮಿಟಿಯವರಲ್ಲಿ ,ಮಸ್ಲಿಮರಲ್ಲಿ ನಾವು ಒತ್ತಾಯ ಹಾಗೂ ವಿನಂತಿ ಮಾಡುತ್ತಿದ್ದೇನೆ.

ಆ ಜಾಗವನ್ನು ದಯವಿಟ್ಟು ಹಿಂದೂಗಳಿಗೆ ಬಿಟ್ಟುಕೊಡಿ ಆ ಜಾಗ ಹಿಂದೂಗಳದ್ದು ಎಂದು ವಿಹೆಚ್‌ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪೈಲ್ ಹೇಳಿಕೆ ನೀಡಿದ್ದಾರೆ.

ಇಂದು ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಜ್ಯೋತಿಷಿ ಗೋಪಾಲ ಕೃಷ್ಣ ಪಣಿಕ್ಕರ್ ಅವರು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಇಲ್ಲಿ ದೇವತಾ ಸಾನಿಧ್ಯ ಅದರಲ್ಲೂ ಶಿವ ಸಾನಿಧ್ಯವಿತ್ತು. ಸಾವಿರಾರು ವರ್ಷದ ಹಿಂದೆ ಅಲ್ಲಿ ದೇವರನ್ನು ಆರಾಧನೆ ಮಾಡುತ್ತಿದ್ದರು ಎಂದು ಇದೀಗ ಕಂಡುಬಂದಿದೆ.

ಹಾಗಾಗಿ ಅದನ್ನು ನಮಗೆ ಬಿಟ್ಟುಕೊಡಿ ಎಂದು ಮುಸಲ್ಮಾನ ಮುಖಂಡರು ಹಾಗೂ ಮಸೀದಿ ಕಮಿಟಿಯವರಿಗೆ ವಿನಂತಿ ಮಾಡುತ್ತಿದ್ದೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!