dtvkannada

'; } else { echo "Sorry! You are Blocked from seeing the Ads"; } ?>

ಹೊಸದಿಲ್ಲಿ: ಬಾಲಿವುಡ್‌ ನಟಿ ಕಂಗನಾ ರಣಾವತ್ ಅವರ ಇತ್ತೀಚೆಗೆ ಬಿಡುಗಡೆಯಾದ ಧಕಡ್ ಹೆಚ್ಚಿನ ಸುದ್ದಿಯಲ್ಲಿತ್ತು. ಆದರೆ ದುರದೃಷ್ಟವಶಾತ್ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕುಸಿದಿದೆ.

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ ಚಿತ್ರವು ಬಿಡುಗಡೆಗೊಂಡ ಎಂಟನೇ ದಿನದಲ್ಲಿ ಕೇವಲ ರೂ. 4,420 ಸಂಗ್ರಹಿಸಿದೆ. 8ನೇ ದಿನ ದೇಶಾದ್ಯಂತ ಕೇವಲ 20 ಟಿಕೆಟ್‌ಗಳನ್ನಷ್ಚೇ ಮಾರಾಟ ಮಾಡುವ ಮೂಲಕ ಬಾಕ್ಸ್ ಆಫೀಸ್’ನಲ್ಲಿ ಹೀನಾಯ ಸೋಲು ಕಂಡಿದೆ ಸಾಧ್ಯವಾಗಿದೆ.

'; } else { echo "Sorry! You are Blocked from seeing the Ads"; } ?>

ರಜನೀಶ್ ಘಾಯ್ ನಿರ್ದೇಶಿಸಿದ, ಧಾಕಡ್ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಬಾಕ್ಸ್ ಆಫೀಸ್ ದಹಕಡ್ ಬಾಕ್ಸ್ ಆಫೀಸ್ ವಿವರಗಳನ್ನು Twitter ನಲ್ಲಿ ಹಂಚಿಕೊಂಡಿದೆ: Dhaakad ಇಂದು ಭಾರತದಾದ್ಯಂತ 20 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ 4 ಸಾವಿರ ಸಂಗ್ರಹಿಸಿದೆ. ಆದೇ ಭಾರತದ ನಂ.1 ಬಾಲಿವುಡ್ ತಾರೆ ಅಲಿಯಾಭಟ್ ಅವರ ಗಂಗೂಬಾಯಿ ಕಾತಿಯಾವಾಡಿ ಚಿತ್ರ ಎರಡನೇ ಶುಕ್ರವಾರ 5.01 ಕೋಟಿ ರೂ ಸಂಗ್ರಹಿಸಿದೆ.

— Box Office (@Box_Office_BO) May 27, 2022

ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಪೇಜ್’ಗಳ ಆಹಾರವಾಗಿದ್ದಾರೆ ಕಂಗಣಾ.

https://twitter.com/MOGEMBO03405372/status/1530272323609280512?

ಮೊದಲ ದಿನದ ಗಳಿಕೆ 50 ಲಕ್ಷ ರೂ.!
ಕಂಗನಾ ರಣಾವತ್ ನಟನೆಯ ‘ಧಾಕಡ್’ (Dhaakad) ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಇದರಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇರುವ ಕಾರಣ, ಕಂಗನಾ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಸಾಹಸ ದೃಶ್ಯಗಳಿಗಾಗಿ ಸುಮಾರು 3 ತಿಂಗಳು ತರಬೇತಿ ನೀಡಲಾಗಿತ್ತು. ಆದರೆ ಸಿನಿಮಾ ಹೀನಾಯ ಹೀನಾಯ ಸೋಲುಕಂಡಿದೆ. ಅದರಲ್ಲೂ ಮುಖ್ಯವಾಗಿ ಬಾಕ್ಸ್ ಆಫೀಸ್‌ನಲ್ಲಿ ಜಾದೂ ಮಾಡಲು ಈ ಸಿನಿಮಾ ಸೋತಿದೆ.

ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಧಾಕಡ್‌ ಸಿನಿಮಾವ ಮೊದಲ ದಿನ 65 ಲಕ್ಷ ರೂ. ಎಂದು ಹೇಳಲಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡುವ ಏಜೆಂಟ್ ಅಗ್ನಿ ಎಂಬ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಇದ್ದರೂ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ

ಧಾಕಡ್’ ಸಿನಿಮಾದ ಸೋಲಿಗೆ ಕೆಲವು ಕಾರಣಗಳಿವೆ. ಮೊದಲನೆಯದಾಗಿ ಇದು ‘ಎ’ ಪ್ರಮಾಣ ಪತ್ರ ಪಡೆದಿರುವ ಸಿನಿಮಾ. 18 ವರ್ಷ ವಯಸ್ಸಿಗಿಂತ ಚಿಕ್ಕ ಮಕ್ಕಳು ಈ ಸಿನಿಮಾವನ್ನು ನೋಡುವಂತಿಲ್ಲ. ಹಾಗಾಗಿ ಫ್ಯಾಮಿಲಿ ಆಡಿಯನ್ಸ್ ‘ಧಾಕಡ್’ ಕಡೆ ಸುಳಿದಿಲ್ಲ. ಇನ್ನು, ಕಂಗನಾ ರಣಾವತ್ ಅವರ ರಿಯಲ್ ಲೈಫ್ ವರ್ತನೆ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅದು ಕೂಡ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ, ಮೇ 20ರಂದು ಬಿಡುಗಡೆ ಆಗಿರುವ ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 2’ ಚಿತ್ರಕ್ಕೆ ಪೈಪೋಟಿ ನೀಡುವಲ್ಲಿ ‘ಧಾಕಡ್’ ವಿಫಲವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ‘ಭೂಲ್ ಭುಲಯ್ಯ 2’ ಸಿನಿಮಾಗೆ ಆದ್ಯತೆ ನೀಡುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!