ಮಂಗಳೂರು: ಇದ್ದದನ್ನು ಕೊಡುವುದರಲ್ಲಿ ಪುಣ್ಯ ಇದೆ, ಇಲ್ಲದನ್ನುಕೊಡುವವನಂತೆ ನಟಿಸುವುದು ವಂಚನೆ ಎಂದು ಬಜಪೆ ಸಂತ ಜೋಸೆಪ್ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯರಾದ ಆಲ್ವಿನ್ ಅರುಣ್ ನೊರೋನ಼ಾ ಅಭಿಪ್ರಾಯ ಪಟ್ಟರು. ಅವರು ಇಂದು ಬಜ್ಪೆ ಸ್ಪೋರ್ಟಿಂಗ್ ಕ್ಲಬ್ (ರಿ.) ಗ್ರೀನ್ ಲೈನ್ ಬಜ್ಪೆ ಎನ್.ಎಫ್.ಸಿ. ಕೊಳಂಬೆ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.)
ಸಂಯುಕ್ತಾಶ್ರಯದಲ್ಲಿ ಕೆ.ಎಂ. ಸಿ. ಆಸ್ಪತ್ರೆ ರಕ್ತನಿಧಿ ಮಂಗಳೂರು ಇದರ ಸಹಬಾಗಿತ್ವದಲ್ಲಿ ನಡೆದ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ 135ನೇ ಸೌಹಾರ್ದ ರಕ್ತ ದಾನ ಶಿಬಿರ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ ಮತ್ತು ರೋಯಲ್ ಐ ಕೇರ್ ಸೆಂಟರ್ ಮಂಗಳೂರು ಇವರ ವತಿಯಿಂದ ಉಚಿತ ಕಣ್ಣಿನ ತಪಾಸಣೆ, ಉಚಿತ ಪ್ರೇಮ್ ಹಾಗೂ ACCU ಲ್ಯಾಬ್ ಮಂಗಳೂರು ಇವರ ವತಿಯಿಂದ ಉಚಿತ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ಇಂದು29-05-2022 ಭಾನುವಾರ ಬಜಪೆ ಅನ್ಸಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿಮಾತಾಡುತ್ತಿದ್ದರು.
ಸಮಾರಂಭದ ಉದ್ಘಾಟನೆಯನ್ನು ಬಜಪೆ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಮನ್ಸೂರ್ ಅಹ್ಮದ್ ಸಅದಿ ಅಲ್ ಖಾಮಿಲ್ ನೆರವೇರಿಸಿದರು.
ವೇದಿಕೆಯಲ್ಲಿ ಮಾರ್ನಿಂಗ್ ಸ್ಟಾರ್ ಶಾಲೆ ಬಜಪೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೀನಾ ಡಿಸೋಜ, ಉದ್ಯಮಿ ಎನ್ ಎಮ್ ಉಮೇಶ್, ಎಸ್ ಡಿ,ಪಿ,ಐ, ಪಟ್ಟಣ ಪಂಚಾಯತ್ ವಲಯ ಅದ್ಯಕ್ಷರಾದ ಇಸ್ಮಾಯಿಲ್ ಇಂಜಿನಿಯರ್, ಬಜಪೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕೆ,ಪಿ,ನಝೀರ್, ಬಜಪೆ ಮಾಜಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಸಾಹುಲ್ ಹಮೀದ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್, ಕೆ,ಎಂ,ಸಿ,ಆಸ್ಪತ್ರೆಯ ವೈದ್ಯರಾದಶಾಲಿನಿ, ಅಖಿಲ್ಯಾಬ್ ಲೊಬೊಝ್ ಮೆಡಿಹಬ್ ಲ್ಯಾಬ್ ನ ವೈಶ್ನವಿ, ಉಪಸ್ಥಿತರಿದ್ದರು,ಇದೇ ಸಂದರ್ಭದಲ್ಲಿ ಸಮಾಜ ಸೇವಾ ಕಾರ್ಯಕರ್ತ ಇರ್ಷಾದ್, ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು.
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯ ನಿರ್ವಾಹಕ ಬಶೀರ್,ರಕ್ತ ಪೊರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ,ಸಿ,ರೋಡ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಶಿಬಿರ ಸಂಯೋಜಕ ಇಂತಿಯಾಝ್ ಬಜಪೆ, ಉಪಸ್ಥಿತರಿದ್ದರು, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು ಸ್ವಾಗತಿಸಿದರು, ಪ್ರದಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ ವಂದಿಸಿದರು, ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.