ಮಂಗಳೂರು : SDPI ಯ ಫ್ಲಾಗನ್ನು ಹಿಡಿದುಕೊಂಡ ಯುವಕರ ಗುಂಪೊಂದು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂಬ ಆರೋಪದಡಿಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ ಬಗ್ಗೆ ವರದಿಯಾಗಿದೆ.
ಮಂಗಳೂರು ಕಣ್ಣೂರಿನಲ್ಲಿ ಮೇ 27 ರಂದು SDPI ದ.ಕ. ಜಿಲ್ಲಾ ಸಮಿತಿ ವತಿಯಿಂದ ಜನಾಧಿಕಾರ ಸಮಾವೇಶದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಹಸ್ರಾರು SDPI ಕಾರ್ಯಕರ್ತರು ತಮ್ಮ ತಮ್ಮ ವಾಹನಗಳಲ್ಲಿ ಬಂದಿದ್ದು ಆದರೆ ಈ ಮಧ್ಯೆ SDPIಯ ಯುವಕರಿದ್ದ ಗುಂಪೊಂದು ತಮ್ಮ ವಾಹನದಲ್ಲಿ ಪೊಲೀಸರು ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ನಿಂದಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಚೆಕ್ ಪೋಸ್ಟ್ ಕರ್ತವ್ಯದಲ್ಲಿ ASI ಚಂದ್ರಶೇಖರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 143 , 353 , 504 , 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೆ ಕರ್ತವ್ಯದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಸಂಗನ ಗೌಡ ಎಂಬಾತನ ಮೈಮೇಲೆ ಬೈಕ್ ಹಾಯಿಸುವ ರೀತಿಯಲ್ಲಿ ಆರೋಪಿಗಳು ತಮ್ಮ ಬೈಕನ್ನು ಸವಾರಿ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಕೂಡ ದೂರಲಾಗಿದೆ. ಸದ್ಯ ಅಪರಿಚಿತ 5 ಮಂದಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.