ಉಪ್ಪಿನಂಗಡಿ: ಬೇಸಿಗೆ ರಜೆಯ ನಿಮಿತ್ತ ತಣ್ಣಗಿದ್ದ ಹಿಜಾಬ್ ವಿಚಾರ ಇದೀಗ ಮತ್ತೆ ಭುಗಿಲೆದ್ದಿದೆ.
ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಹಿಜಾಬ್ ತೊಟ್ಟ ವಿದ್ಯಾರ್ಥಿಗಳನ್ನು ಸಸ್ಪೆನ್ಡ್ ಮಾಡಿದ ಘಟನೆ ಇಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಇದೇ ವೇಳೆ ಕ್ಯಾಂಪಸ್ ಒಳಗಡೆ ನುಗ್ಗಿ ಏಕಾ ಏಕಿ ವಿದ್ಯಾರ್ಥಿನಿಯರ ವೀಡಿಯೋ ತೆಗೆದ ಪತ್ರಕರ್ತನೊರ್ವನನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದು, ಪ್ರಿನ್ಸಿಪಾಲ್ ರನ್ನು ಸ್ಥಳಕ್ಕೆ ಕರೆಸಿ ಪರಿಹಾರ ಕಂಡುಕೊಂಡಿದ್ದಾರೆ.
ಪ್ರಿನ್ಸಿಪಾಲರ ಉಪಸ್ಥಿತಿಯಲ್ಲಿ ಪತ್ರಕರ್ತ ವೀಡಿಯೋವನ್ನು ಡಿಲೀಟ್ ಮಾಡಿದ್ದಾರೆ.
ನಾನು ರಿಪೋರ್ಟ್ ಮಾಡಲಷ್ಟೇ ಅನುಮತಿ ನೀಡಿದ್ದೇನೆ ವೀಡಿಯೋ ಮಾಡಲು ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿಗಳಲ್ಲಿ ಪ್ರಿನ್ಸಿಪಾಲ್ ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪತ್ರಕರ್ತನ ಮೇಲೆ ಒಮ್ಮೆಯೂ ಹಲ್ಲೆಗೆ ಪ್ರಯತ್ನಿಸಿಲ್ಲ ಇದೆಲ್ಲವೂ ಸುಳ್ಳು ವಿಚಾರಗಳು.
ಕ್ಯಾಂಪಸ್ ನ ಒಳಗಡೆ ವೀಡಿಯೋ ಚಿತ್ರಿಕರಿಸುವಂತಿಲ್ಲ ಏಕಾ ಏಕಿ ಬಂದು ವೀಡಿಯೋ ಮಾಡಿದಕ್ಕೆ ಪ್ರಶ್ನಿಸಿದ್ದೇವೆ ಮತ್ತೆ ಯಾವುದೇ ಗಲಭೆ ಸೃಷ್ಟಿಸಿಲ್ಲ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
ವರದಿಗಾರನೊಬ್ಬ ಕಾಲೇಜಿ ಕ್ಯಾಂಪಸ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದು, ಅದನ್ನು ತಡೆದ ವಿದ್ಯಾರ್ಥಿಗಳು, ಆತ ಚಿತ್ರೀಕರಿಸಿದ ವಿಡಿಯೋವನ್ನು ಕ್ಯಾಮರಾದಿಂದ ಡಿಲಿಟ್ ಮಾಡಿಸಿದ್ದಾರೆ. ಕಾಲೇಜಿನ ಕ್ಯಾಂಪಸ್ ಒಳಗೆ ಬಂದು ವಿಡಿಯೋ ಮಾಡಬೇಕಾದರೆ ಅನುಮತಿಯನ್ನು ಪಡೆದಿರಬೇಕು. ಆದರೆ ಇವರು ಯಾವುದೇ ಅನುಮತಿಯನ್ನು ಪಡೆದಿಲ್ಲ. ಆದ್ದರಿಂದ ವಿಡಿಯೋ ಡಿಲೀಟ್ ಮಾಡಿಸಿದ್ದೇವೆ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ . ಆದರೆ ಈಗ ಮಾಧ್ಯಮದಲ್ಲಿ ಪತ್ರಕರ್ತರಿಗೆ ವಿದ್ಯಾರ್ಥಿಗಳಿಂದ ಹಲ್ಲೆ ಎನ್ನುವ ರೀತಿಯಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ . ಇದು ಸಂಪೂರ್ಣ ಸುಳ್ಳು ಎಂದು ಕಾಲೇಜಿನ ವಿದ್ಯಾರ್ಥಿಗಳು ಸ್ಪಷ್ಟನೆ ನೀಡಿದ್ದಾರೆ .
ಕಾಲೇಜಿನ ಪ್ರಾಂಶುಪಾಲರು ಮತ್ತು ಇತರೆ ಉಪನ್ಯಾಸಕರ ಮುಂದೆಯೇ ವಿಡಿಯೋ ಡಿಲೀಟ್ ಮಾಡಿಸಿದ್ದು, ಯಾವುದೋ ಕೊಠಡಿಯಲ್ಲಿ ಕೂಡಿ ಹಾಕಿಲ್ಲ. ಬದಲಾಗಿ ಕಾಲೇಜಿನ ಕಚೇರಿಯಲ್ಲೇ ಕರೆದುಕೊಂಡು ಕುರ್ಚಿಯಲ್ಲಿ ಕೂರಿಸಿ ವೀಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.