ಬಂಟ್ವಾಳ: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೂತನ L.K.G & U.K.G ತರಗತಿಯ ಕೊಠಡಿ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬೋಳಂತೂರು ಶಾಲೆಯೂ ಶತಮಾನದಷ್ಟು ಹಳೆಯದಾಗಿದ್ದು, ಇಲ್ಲಿ ವಿದ್ಯಾರ್ಜನೆಗೈದ ಹಲವರು ರಾಜಕೀಯ, ಧಾರ್ಮಿಕ, ಸಾಮಾಜಿಕ,ಕ್ರೀಡೆ, ಉದ್ಯಮ, ಕ್ಷೇತ್ರಗಳಲ್ಲಿ ಹೆಸರುಗಳಿಸಿದ್ದಾರೆ.
ಇಂಗ್ಲೀಷ್ ಕಲಿಕಾ ವ್ಯಾಮೋಹದಿಂದ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿ ಆರಂಭಗೊಂಡ LKG UKG ತರಗತಿಗೆ ನೂತನವಾಗಿ ನಿರ್ಮಿಸಲಾದ ಕೊಠಡಿಗಳಿಗೆ ಫೈಟಿಂಗ್, ಚಿತ್ರ ಬರೆಯುವ ಮೂಲಕ ಹಳೆವಿದ್ಯಾರ್ಥಿಗಳು ಸಹಕರಿಸಿದರು.
ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗು ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀ ಚಂದ್ರಶೇಖರ ರೈ ನಾರ್ಶ ವಹಿಸಿಕೊಂಡರು
ನೂತನವಾಗಿ ಆರಂಭಗೊಂಡ ತರಗತಿಗಳ ಉದ್ಘಾಟನೆಯನ್ನು ಅನಂತ ಪದ್ಮನಾಭ ಬಳ್ಳಕುರಾಯ ಮತ್ತು ಇಸ್ಮಾಯಿಲ್ ನೇರವೇರಿಸಿದರು.
ಪುಟಾಣಿ ಮಕ್ಕಳ ಪ್ರಾರ್ಥನಾ ಹಾಡಿನೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕಿ ಗೀತಾ.ಎಸ್. ಶಾಲೆಯ ಅಭಿವೃದ್ಧಿ ಇನ್ನಿತರ ಚಟುವಟಿಕೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಊರಿನ ಹಿರಿಯರಾದ ಶ್ರೀ ಕೇಶವಯ್ಯ ಎಸ್, ಶ್ರೀಮತಿ ಸುರೇಶಿನಿ,ಶ್ರೀ ಇಸ್ಮಾಯಿಲ್, ಶ್ರೀ ಸಂದೇಶ್.ಎಚ್.ನಾಯ್ಕ್, ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶಾಲಿಮಾರ್ ಬಿಲ್ಡರ್ ಇದರ ಮಾಲೀಕರಾದ ಉದ್ಯಮಿ ಸುರಿಬೈಲು ನಿವಾಸಿ ಬಶೀರ್ ಆಹ್ಮದ್ ಶಾಲೀಮರ್ ಅವರು ನೀಡಿ ಸಹಕರಿಸಿದರು. ಬೋಳಂತೂರು ಪರಿಸರದ ಬಿ.ಕೆ.BOYS ಬಂಗಾರ ಕೋಡಿ, ಬೋಳಂತೂರು ಕ್ರೀಡಾರಂಗದಲ್ಲಿ ಮತ್ತು ಸಮಾಜಿಕ ರಂಗದಲ್ಲಿ ಮಿಂಚುತ್ತಿರುವ ಕ್ಲಬ್ ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಆಬ್ಬಾಸ್ ಆಲಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಶೀರ್ ನಾರಂಕೋಡಿ, ಬೋಳಂತೂರು ಗ್ರಾಮ.ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುಷ್ಪ.ಎಂ, ಬೊಳಂತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಚಂದ್ರಶೇಖರ್ ರೈ ನಾರ್ಶ, ಅಶ್ರಪ್ ಸುರಿಬೈಲ್, ಯಾಕೂಬ್ ದಂಡೆಮಾರ್, ಹಳೆ ವಿದ್ಯಾರ್ಥಿ ಹಾಗೂ ಸಾಮಾಜಿಕ ಮುಖಂಡ ಜಯರಾಮ್ ರೈ ಗುಡ್ಡೆಮಾರ್, ಹಳೆ ವಿದ್ಯಾರ್ಥಿ ಸಂಘದ ನೂತನ ಅದ್ಯಕ್ಷರಾದ ತಮೀಮ್ ಬೊಳಂತೂರು, ಇಸ್ಮಾಯಿಲ್ ಬೊಳಂತೂರು, ಉಸ್ಮಾನ್ ಬಂಗಾರಕೋಡಿ , ಮಹಮ್ಮದ್ ಮಾಡದ ಬಳಿ, ಅಮೀನ್ ಬೀಡಿ ಮಾಲಕರಾದ ಸುರೇಂದ್ರ ಅಮೀನ್, ಪವಿತ್ರ ಬೀಡಿ ಮಾಲಕ ರಪೀಕ್.ಕೆ.ಪಿ.ಬೈಲ್, ಯುವ ಉದ್ಯಮಿ ಸಲೀಂ ಕುಡುಂಬಕೋಡಿ, ಸಲೀಂ, ಶಫೀಕ್ ಬೊಟ್ಟಿಗದ್ದೆ, ಹಸೈನಾರ್ ಟಿ.ತಾಳಿತ್ತನೂಜಿ, ಆವೀರ್ ಹಾಗೂ ರವಿ ಇನ್ನಿತರರು ಉಪಸ್ಥಿತರಿದ್ದರು. ಜಾತಿ-ಮತ ಬೇದವಿಲ್ಲದೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟಿತ ಒಗ್ಗೂಡಿಕೆ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.
ದೈಹಿಕ ಶಿಕ್ಷಕ ಹರೀಶ್ ವಿ ಸ್ವಾಗತಿಸಿದರು, ಹಮೀದ್ ಗೋಳ್ತಮಜಲ್ ನಿರೂಪಿಸಿದರು, ಶಿಕ್ಷಕಿ ಉಷಾ ಧನ್ಯವಾದ ಸಲ್ಲಿಸಿದರು.