ಮುಂಬೈ: ಹಸುವಿನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ ಆರೋಪದಡಿ ವಿಕೃತ ಕಾಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ದೀಪಕ್ ರಾಜವಾಡೆ(22) ಎಂದು ಗುರುತಿಸಲಾಗಿದ್ದು, ಈತ ಪುಣೆಯ ಕುಸ್ಗಾಂವ್ ನಿವಾಸಿಯಾಗಿದ್ದಾನೆ. ಇದೀಗ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೇ 31 ರಂದು ಈ ಘಟನೆ ನಡೆದಿದ್ದು, ದೂರುದಾರರಾದ ಸತೀಶ್ ದಗ್ದು ಕೊಕರೆ ಅವರು ಹಸು ಏಕಾಏಕಿ ಚಿರಾಡುತ್ತಿರುವುದನ್ನು ಕೇಳಿಸಿಕೊಂಡು ದನದ ಕೊಟ್ಟಿಗೆ ಹೋಗಿ ನೋಡಿದ್ದಾರೆ. ಈ ವೇಳೆ ಯುವಕನೋರ್ವ ಬಟ್ಟೆ ಬಿಚ್ಚಿ ಹಸುವಿನ ಮೇಲೆ ಹಲ್ಲೆ ನಡೆಸಿ ಸೆಕ್ಸ್ ಮಾಡುತ್ತಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ನಂತರ ಆರೋಪಿಯನ್ನು ದೀಪಕ್ ಎಂದು ಸತೀಶ್ ಗುರುತಿಸುತ್ತಿದ್ದಂತೆ, ದನದ ಕೊಟ್ಟಿಗೆ ಬಳಿ ಸತೀಶ್ ಕುಟುಂಬಸ್ಥರು ಜಮಾಯಿಸಿದ್ದಾರೆ. ಬಳಿಕ ತಕ್ಷಣ ದೀಪಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಕೊಟ್ಟಿಗೆ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಕೃತ್ಯ ಸೆರೆಯಾಗಿದೆ.