ಬೆಂಗಳೂರು: ಯುವತಿಯೋರ್ವಳನ್ನು ಹಿಂದೆ ಕೂರಿಸಿಕೊಂಡು ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಮರಕ್ಕೆ ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.

ಭೀಕರ ಅಪಘಾತದಲ್ಲಿ ಮೃತಪಟ್ಟವರು ಗಗನ್ ದೀಪ್ (29) ಯಶಸ್ವಿನಿ (23) ತಿಳಿದು ಬಂದಿದೆ.
ಇವರಿಬ್ಬರು ಪ್ರೆಸ್ಟೀಜ್ ಕಂಪೆನಿಯ ಉದ್ಯೋಗಿಗಳಾಗಿದ್ದು ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಕಂಟ್ರೋಲ್ಗೆ ಸಿಗದೆ ಮರಕ್ಕೆ ಗುದ್ದಿದ್ದಾರೆಂದು ತಿಳಿದು ಬಂದಿದೆ.

ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಗ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.