ಪುತ್ತೂರು: ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ರೈ(29) ರನ್ನು ಪಮರ್ಲಂಪಾಡಿ ಸಮೀಪ ಇಂದು ಮಧ್ಯಾಹ್ನ ಹತ್ಯೆ ಮಾಡಲಾಗಿದೆ.
2019 ಸೆ.3 ರಂದು ಸಂಪ್ಯದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ(27) ರವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಂಪ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವದ ವೇಳೆ, ಗ್ರಾಮಾಂತರ ಠಾಣೆಯ ಮುಂಭಾಗದಲ್ಲಿಯೇ ಈ ಹತ್ಯೆ ನಡೆದಿತ್ತು.
ಇದೀಗ ಹಳೆಯ ದ್ವೇಷದ ಹಿನ್ನೆಲೆ ಆರ್ಯಾಪು ಗ್ರಾಮದ ಸಂಪ್ಯ ಪೊಲೀಸ್ ಠಾಣೆಯ ಹಿಂಬದಿ ನಿವಾಸಿ ದಿವಂಗತ ಬಾಲಕೃಷ್ಣ ರೈ ಎಂಬವರ ಪುತ್ರನಾದ ಚರಣ್ ರಾಜ್ ರೈ(29) ಕೊಲೆ ನಡೆದಿದೆ.
ಚರಣ್ ರಾಜ್ ರೈ ರವರ ಮೆಡಿಕಲ್ ಶಾಪ್ ನಾಳೆ ಪೆರ್ಲಂಪಾಡಿಯಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ತಲ್ವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
2019 ಸೆ.3 ರಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೂರ್ವದ್ವೇಷದಿಂದ, ಪುತ್ತೂರು ತಾಲೂಕು ಹಿಂಜಾವೇ ಸಮಿತಿ ಕಾರ್ಯದರ್ಶಿ, ಆರ್ಯಾಪು ಗ್ರಾಮದ ಮೇರ್ಲ ರಮೇಶ್ ಸುವರ್ಣರವರ ಪುತ್ರ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಮಾಡಲಾಗಿತ್ತು.
ಆ ದಿನ ಮಧ್ಯರಾತ್ರಿ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆ ಎದುರಲ್ಲೇ ಹಾಕಲಾಗಿದ್ದ ಗಣೇಶೋತ್ಸವ ಚಪ್ಪರದಲ್ಲಿ ಚೂರಿ ಇರಿದು ಕೊಲೆ ಮಾಡಲಾಗಿತ್ತು. ಗಣೇಶ ವಿಗ್ರಹದ ಶೋಭಾಯಾತ್ರೆ ನಡೆದ ಬಳಿಕ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಅದನ್ನು ವೀಕ್ಷಿಸುತ್ತಿದ್ದ ಕಾರ್ತಿಕ್ ಮೇಲೆ ದಾಳಿ ಮಾಡಲಾಗಿತ್ತು.
ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ಕಾರ್ತಿಕ್ ಬಳಿ ಬಂದ ಆರೋಪಿಗಳು ಕತ್ತಿಯಿಂದ ಕಾರ್ತಿಕ್ ಅವರ ಎದೆಭಾಗಕ್ಕೆ ತಿವಿದಿದ್ದರು.