ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಮೊಗರ್ಪಣೆ ದರ್ಗಾ ಮಸೀದಿ ಬಳಿ ಹೊಟೇಲ್ ಫಿಶ್ ಲ್ಯಾಂಡ್ ನವೀಕರಣಗೊಂಡು ನೂತನ ಮಾಲಕತ್ವದೊಂದಿಗೆ ಶುಭಾರಂಭಗೊಂಡಿತು.
ಪ್ರಸಿದ್ಧ ವಿದ್ವಾಂಸ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು.
ಯು.ಎಸ್ ಕುಂಞಿಕೋಯ ತಂಙಳ್ ಸಅದಿ ಗಾಂಧಿನಗರ ದುವಾ ನೆರವೇರಿಸುವ ಮೂಲಕ ನೂತನ ಮಾಲಕತ್ವದ ಫಿಸ್ ಲ್ಯಾಂಡ್ ಸಂಸ್ಥೆಗೆ ಶುಭಹಾರೈಸಿದರು.ಮಾಲಕರಾದ ಹಮೀದ್ ಕಡಂಬು ಗ್ರಾಹಕರನ್ನು ಸ್ವಾಗತಿಸುತ್ತಾ ಬರಮಾಡಿಕೊಂಡರು. ಮುಂದಕ್ಕೂ ನಿಮ್ಮೆಲ್ಲರ ಸಹಕಾರ ನೀಡಬೆಕೆಂದು ಕೇಳಿಕೊಂಡರು.ಇನ್ನೋರ್ವ ಪಾಲುದಾರ ನಿಝಾಮುದ್ದೀನ್ ಕೂಡ ಎಲ್ಲರನ್ನೂ ಬರಮಾಡಿಕೊಂಡರು.
ಮೊಗರ್ಪಣೆ ಜುಮಾ ಮಸೀದಿ ಪ್ರೆಸಿಡೆಂಟ್ ಇಬ್ರಾಹಿಂ ಹಾಜಿ(Sea Food), ಕಾರ್ಯದರ್ಶಿ ಎಸ್.ಯು ಇಬ್ರಾಹಿಂ, ಕಟ್ಟಡ ಮಾಲಕರಾದ ಕೆ.ಎಚ್ ಮಹಮ್ಮದ್, ದಿನಸಿ ಬಝಾರ್ ಮಾಲಕರಾದ ಸಾಹುಕಾರ್ ಅಚ್ಚು, ಇಂಜಿನಿಯರ್ ಶಮೀರ್ ಬಯಂಬಾಡಿ,ಖಲಂದರ್ ಶಾಫಿ ಕಡಂಬು, ಶಾಫಿ ಮರಿಕೆ, ನಾಸಿರ್ ಕುಂಬ್ರ, ಖಬೀರ್ ಕುಂಬ್ರ ಸೇರಿದಂತೆ ಹಲವು ಗಣ್ಯರು ಹೊಟೇಲ್’ಗೆ ಆಗಮಿಸಿ ಶುಭಹಾರೈಸಿದರು.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ಸಮೀಪ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳನ್ನೊಳಗೊಂಡ ಹೊಟೇಲ್ ಫಿಶ್ ಲ್ಯಾಂಡ್‘ನಲ್ಲಿ ಹಲವು ಬಗೆಯ ಖಾದ್ಯಗಳು ಲಭ್ಯವಿರಲಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯು ಇಲ್ಲಿ ಹೊಂದಿದೆ.
ನುರಿತ ಪಾಕತಜ್ಞರಿಂದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳಲ್ಲಿ ಹೊಸರುಚಿಯನ್ನು ಪರಿಚಯಿಸುವುದು ಈ ಹೋಟೇಲ್’ನ ವಿಶೇಷತೆಯಾಗಿದೆ.
ಚಿಕನ್ ಮತ್ತು ಮಟನ್ ಐಟಮ್’ಗಳಲ್ಲಿ ಮುಖ್ಯವಾಗಿ ಆಲ್ಫಾಮ್ ಚಿಕನ್, ಗ್ರಿಲ್ ಚಿಕನ್, ತಂದೂರಿ ಚಿಕನ್, ಚಿಕನ್ ಟಿಕ್ಕ, ಪನೀರ್ ಟಿಕ್ಕ ಸೇರಿದಂತೆ ನಾರ್ಥ್ ಸೌತ್ ಚೈನೀಸ್ ಫುಡ್’ಗಳು ಇಲ್ಲಿ ಲಭ್ಯವಿರಲಿದೆ.
ಕೇರಳ ಮಾದರಿ ಪರೋಟಾ ಮತ್ತು ವಿವಿಧ ಖಾಧ್ಯಗಳು ಇಲ್ಲಿ ಲಭ್ಯವಿದ್ದು ಮಾಂಸಾಹಾರ’ಗಳಲ್ಲಿ ಚಟ್ಟಿಚೋರು, ಕುಡುಕ್ಕು ಬಿರಿಯಾನಿ, ಮಟನ್ ಬಿರಿಯಾನಿ, ಅರಬ್ ಮಂದಿ
ಹಾಗೂ ಸಸ್ಯಾಹಾರದಲ್ಲಿ ವೆಜ್ ಬಿರಿಯಾನಿ, ವೆಜ್ ನ್ಯೂಡಲ್ಸ್ , ಪನ್ನೀರ್ ಚಿಲ್ಲಿ , ಪನ್ನೀರ್ ಕಡಾಯಿ, ದಾಲ್ ಫೈ ಸೇರಿದಂತೆ ಫ್ರೆಶ್ ಜ್ಯೂಸ್’, ಮಿಲ್ಕ್ ಶೇಖ್, ಸ್ಪೆಷಲ್ ಪುಟ್ಟು ಐಸ್‌ಕ್ರೀಂ, ಹನಿಮೂನ್ ಪ್ಯಾರಾಡೈಸ್ ಇಲ್ಲಿಯ ವಿಶೇಷತೆಯಾಗಿದೆ.
ವೆರೈಟಿ ಟೇಸ್ಟಿನ ಖಾದ್ಯಗಳು ಫಿಸ್ ಲ್ಯಾಂಡ್ ಮೂಲಕ ಜನರ ಮನೆ ಬಾಗಿಲಿಗೆ ದೊರೆಯಲಿದ್ದು, ವಿನೂತನ ರೆಸಿಪಿಯನ್ನು ಸವಿಯಲು ಮನೆಯಲ್ಲಿಯೇ ಕುಳಿಕು ಆರ್ಡರ್ ಮಾಡಬಹುದಾಗಿದೆ.
ಕರೆ ಮಾಡಿ ಆರ್ಡರ್ ಮಾಡಿದರೆ 5 ಕಿಲೋ ಮೀಟರ್ ಆಸುಪಾಸು ಉಚಿತ ಡೆಲಿವರಿ ವ್ಯವಸ್ಥೆ ಇರುತ್ತದೆ ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ +91 95354 35396 ಸಂಪರ್ಕಿಸಿ