ಉಪ್ಪಿನಂಗಡಿ: ನೆರೆಮನೆಯ ಅಪ್ರಾಪ್ತ ಬಾಲಕಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ.
ಮುನಾಸೀರ್ ಅಪ್ರಾಪ್ತ ಬಾಲಕಿಯ ನೆರೆಮನೆಯವನಾಗಿದ್ದು, ಬಾಲಕಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು, ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ಮೇ.30 ರಂದು ಬಾಲಕಿ ಮನೆಯಿಂದ ಶಾಲೆಗೆ ಹೊರಟು ಅರ್ಧ ದಾರಿ ತಲುಪಿದ ವೇಳೆ ಮುನಾಸಿರ್ ನಿನ್ನನ್ನು ಕಾರಿನಲ್ಲಿ ಶಾಲೆಗೆ ಬಿಡುತ್ತೇನೆ ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೇ ಉಪ್ಪಿನಂಗಡಿ ಲಾಡ್ಜ್ ಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದು, ಅದೇ ರೀತಿ ಜೂ.7 ರಂದು ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ ಬಲಾತ್ಕಾರವಾಗಿ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಮತ್ತೆ ಬಲವಂತವಾಗಿ ಅತ್ಯಾಚಾರ ವೆಸಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ, ಲಾಡ್ಜ್ ನಿಂದ ಕರೆದುಕೊಂಡು ಬಂದು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 71/2022 ಕಲಂ: 363, 376(2)(ಎನ್) 506 ಐ.ಪಿ.ಸಿ. ಮತ್ತು ಕಲಂ; 5 (ಎಲ್), 6 ಪೋಕ್ಸೋ ಕಾಯ್ದೆ 2012 ರಂತೆ ಪ್ರಕರಣ ದಾಖಲಾಗಿದೆ.