dtvkannada

ಉಪ್ಪಿನಂಗಡಿ: ಶಾಲೆ ಕಾಲೇಜು ಪ್ರಾರಂಭವಾದಂತೆ ಹಿಜಾಬ್ ಪಟ್ಟು ಮತ್ತಷ್ಟು ತಾರಕ್ಕೇರುತ್ತಿದ್ದು.
ಇದೀಗ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ 30 ರಷ್ಟು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಮಾನತು ಗೊಳಿಸಿದ್ದು ಇದೀಗ ಪ್ರಾಂಶುಪಾಲರ ನಡೆಯ ವಿರುದ್ಧ ವಿದ್ಯಾರ್ಥಿನಿಯೋರ್ವಳ ಬರಹ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ

ಹೈಕೋರ್ಟ್ ತೀರ್ಪು ಕೇಸರಿ ಶಾಲು ಮತ್ತು ಹಿಜಾಬ್ ದರಿಸುವಂತಿಲ್ಲ ಎಂದಾಗಿತ್ತು ಆದರೆ ಹಿಜಾಬ್ ತೊಟ್ಟು ಬಂದ ಅದೇ ದಿನ ಹಲವಾರು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದು ಆದರೆ ಪ್ರಾಂಶುಪಾಲರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ನೇರವಾಗಿ ಹಿಜಾಬ್ ದಾರಿಣಿಗಳನ್ನು ಮಾತ್ರವೇ ಅಮಾನತು ಮಾಡಿ ತಾರತಮ್ಯ ಎಸೆಗಿದ್ದಾರೆ ಇದರ ಮಧ್ಯೆ ಹಿಜಾಬ್ ದಾರಿಣಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ರಜೆ ಎಂದು ಹೇಳಿ ಮನೆಗೆ ಕಳುಹಿಸಿ ಪುತ್ತೂರು ಶಾಸಕರನ್ನು ಕಾಲೇಜಿಗೆ ಕರೆಸಿ ಹಿಜಾಬ್ ಧರಿಸುವ ವಿದ್ಯಾರ್ಥಿಗಳನ್ನು ಸಸ್ಪೆನ್ಡ್ ಮಾಡುವಂತೆ ಮನವಿ ಮಾಡಿದ್ದು ಅದಕ್ಕೆ ತಕ್ಕವಾದ ಹೇಳಿಕೆಯನ್ನು ಶಾಸಕರು ನೀಡಿದ್ದಾರೆ.

ಆದರೆ ಈ ನಿಯಮಗಳೆಲ್ಲವೂ ಒಂದು ಧರ್ಮವನ್ನು ಮೆಚ್ಚಿಸುವಂತಿದ್ದು ಇದೀಗ ಇವರ ನಡೆಯ ವಿರುದ್ಧ ವಿದ್ಯಾರ್ಥಿನಿಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾಳೆ.
ಅವಳ ಬರಹ ಓದಿ:

ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಾಲೇಜು. ಸುತ್ತಲೂ ಇರುವ ಹಲವಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಲಂಬಿಸಿರುವ ವಿದ್ಯಾ ಕೇಂದ್ರ. ಇತ್ತೀಚಿಗೆ ಹಿಜಾಬ್ ಹೆಸರಲ್ಲಿ ಕಾಲೇಜು ಸುದ್ದಿಯಲ್ಲಿದೆ. ಇಲ್ಲದ ಆರೋಪಗಳು ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದ ಎಲ್ಲಡೆ ಹಿಜಾಬ್ ಅವಕಾಶ ನಿರಾಕರಿಸಿದಾಗ ನಮ್ಮ ಕಾಲೇಜುನಲ್ಲಿಯೂ ಹಿಜಾಬ್ ನಿರ್ಬಂಧವಾಯಿತು. ಪರೀಕ್ಷೆ ಪ್ರಾರಂಭವಾದ ಕಾರಣ ಹಿಜಾಬ್ ಕಳಚಿ ಪರೀಕ್ಷೆ ಎದುರಿಸಲು ಸ್ಥಳೀಯ ಸಮುದಾಯ ನಾಯಕರು ಸಲಹೆ ಇತ್ತರು. ಅದರಂತೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದರೂ ಹೆಚ್ಚಿನ ವಿದ್ಯಾರ್ಥಿನಿಗಳುಗಳು ಪರೀಕ್ಷೆ ಬರೆದವು. ಮುಂದೆ ಹೈ ಕೋರ್ಟ್ ನಲ್ಲಿ ಬಂದ ತರಗತಿಯಲ್ಲಿ ಹಿಜಾಬ್ ನಿರ್ಬಂಧ ತಿರ್ಪನ್ನು ಚಾಚು ತಪ್ಪದೇ ಪಾಲಿಸುತ್ತ ಬಂದೆವು. ತರಗತಿಗೆ ಹಿಜಾಬ್ ಕೆಳಗಿಳಿಸಿ ಹೋಗುತ್ತಿದ್ದೇವು. ವಾರಂಡಕ್ಕೆ ಬರವಾಗ ಯುನಿಫಾರ್ಮ್ ಶಾಲನ್ನೇ ತಲೆಗೆ ಹಾಕುತ್ತಿದ್ದೆವು. ಇದೆ ಪ್ರಕ್ರಿಯೆ ಕಳೆದ ವಾರದ ವರೆಗೂ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿತ್ತು.

ಕಾಲೇಜು ಯಾವುದೇ ತಕರಾರಿಲ್ಲದೆ ನಡೆಯುತ್ತಿದ್ದದ್ದು ABVP ವಿದ್ಯಾರ್ಥಿ ಘಟಕಕ್ಕೆ ನುಂಗಲಾರದ ತುತ್ತಾಗಿತ್ತು. ಅದಕ್ಕಾಗಿ ಮತ್ತೇ ಹೊಂಚು ಹಾಕಿ ಹೊಸ ವಿಕೃತಿ ಮೆರೆಯಲು ಕೈ ಹಾಕಿದರೂ ABVP ಪುಂಡರು. ಹಿಜಾಬ್ ಕ್ಯಾಂಪಸ್ ವರಾಂಡ ಎಲ್ಲೂ ಹಾಕಬಾರದೆಂದು ಪ್ರಾಂಶುಪಾಲರಲ್ಲಿ ಹೈಕೋರ್ಟ್ ತಿರ್ಪಿನಲ್ಲಿ ಉಲ್ಲೇಖವಿಲ್ಲದ ವಿಚಾರವನ್ನು ಜಾರಿಗೊಳಿಸಲು ಮನವಿ ಕೊಟ್ಟರು. ಇದನ್ನು ಪುರಸ್ಕರಿಸಲು ಪ್ರಾಂಶುಪಾಲರು ಹಿಂದೇಟು ಹಾಕಿದಾಗ ABVP ಹುಡುಗರು ತರಗತಿ ಬಹಿಷ್ಕರಿಸಿ ಕೇಸರಿ ಶಾಲು ಹಾಕಿ ಸಂವಿಧಾನ ವಿರೋಧಿ ಘೋಷಣೆ ಕೂಗಿ MLA ಬರಲು ಒತ್ತಾಯ ಮಾಡಿದಾಗ ಕಾಲೇಜಿನಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಗಳನ್ನು ಉಪನ್ಯಾಸಕರು ರಜೆ ಎಂದು ಘೋಷಿಸಿ ಮನೆಗೆ ಕಳುಹಿಸಿ ಹಿಂದೂ ವಿದ್ಯಾರ್ಥಿಗಳೊಂದಿಗೆ ಏಕಪಕ್ಷಿಯವಾಗಿ ಸರ್ವಾಧಿಕಾರಿ ಧೋರಣೆಯೊಂದಿಗೆ ಶಾಸಕರು ಆದೇಶ ಹೊರಡಿಸಿದರು. ಹೈ ಕೋರ್ಟ್ ನಲ್ಲಿ ಹೇಳಿರದ ವಿಷಯವನ್ನು ವಿದ್ಯಾರ್ಥಿನಿಯರ ಮೇಲೆ ಹೇರಿದರು.

ವಿದ್ಯಾರ್ಥಿನಿಯರು ಕಾಲೇಜು ಮೆಟ್ಟಿಲೇರದಂತೆ ಉಪನ್ಯಾಸಕರು ತಡೆದರು. ಇದರ ಮದ್ಯೆ ಮಾಧ್ಯಮಗಳು ಅನುಮತಿ ಪಡೆಯದೇ ಕಾಲೇಜು ಪ್ರವೇಶಿಸಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ತೋರಿ ವಿಡಿಯೋ ಮಾಡಿದಾಗ ಸ್ವತಃ ಪ್ರಾಂಶುಪಾಲರ ಸಮ್ಮುಖದಲ್ಲಿಯೇ ವಿಡಿಯೋ ಡಿಲೀಟ್ ಮಾಡಿಸಿದೆವು. ನಂತರ ಆತ ಹಲ್ಲೆ ಎಂಬ ನೌಟಂಕಿ ಆಟವಾಡಿ ವಿದ್ಯಾರ್ಥಿಗಳ ವಿರುದ್ಧ ಠಾಣೆ ಮೆಟ್ಟಿಲೇರಿದರು.

ಕಾಲೇಜಿನಲ್ಲಿ AVBP ಕಾರ್ಯಕರ್ತರು ಅವರಪ್ಪನ ಕಾಲೇಜು, ನಾವು ಹೇಳಿದ್ದೆ ಶಾಸನ ಎಂಬಂತೆ ವರ್ತಿಸಲು ಪ್ರಾರಂಭಿಸಿದರು. ಅವರು ಮಾಡುವ ಪುಂಡಾಟಿಕೆ ಬಗ್ಗೆ ಪ್ರಾಂಶುಪಾಲರಲ್ಲಿ ಹಲವು ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿರಲಿಲ್ಲ. ನಾವು ಎತ್ತ ಹೋದರು ಅನುಮತಿ ಇಲ್ಲದೆ ಉಪನ್ಯಾಸಕರು ನಮ್ಮನ್ನು ವಿಡಿಯೋ ಚಿತ್ರೀಕರಿಸುವ ಮೂಲಕ ಕಾಡುತ್ತಿದ್ದರು. ಕೇಳಿದರೆ ಇದು ಶಾಸಕರಿಗೆ ಕಲಿಸಲು ಎನ್ನುವ ಉತ್ತರ ನೀಡುತ್ತಿದ್ದರು.

ಕೇಸರಿ ಶಾಲು ಹಾಕಿದವರಿಗೆ ಶಿಸ್ತು ಕ್ರಮ ಕೈಗೊಳ್ಳಿ ಅಂದ ವಿದ್ಯಾರ್ಥಿನಿಗಳಿಗೆ ಸಿಕ್ಕಿದ್ದು ತಮ್ಮ ಅಮಾನತು ಎಂಬ ಭಾಗ್ಯ..!
ಪ್ರಾಂಶುಪಾಲರು ಇಲ್ಲದ ಕಾರಣ ಹೇಳಿ ಒಂದೇ ವಾರದಲ್ಲಿ ಮಾಡಿದ ಅಮಾನತು ಮಾಡಿದ ವಿದ್ಯಾರ್ಥಿಗಳ ಸಂಖ್ಯೆ 30 ದಾಟಿದೆ. ದುರಂತವೆಂದರೆ ಈ ವಿದ್ಯಾರ್ಥಿನಿಯರಿಗೆ ಕಾಲೇಜು ನಿಯಮದ ಪ್ರಕಾರ ನೋಟೀಸ್ ನೀಡಿ ಸ್ಪಷ್ಟನೆ ಕೇಳಬೇಕು. ಅದನ್ನು ನೀಡಿಲ್ಲ. ಮದ್ಯರಾತ್ರಿ ವಾಟ್ಸಪ್ ಸಂದೇಶದ ಮೂಲಕ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ. ಕೋರ್ಟ್ ನಿಯಮ ಪಾಲಿಸಿದರು ನಿಮ್ಮನ್ನು ಶಿಕ್ಷಣ ಕಲಿಯಲು ಬಿಡಲ್ಲ ಎಂಬ ABVP ತಂತ್ರಕ್ಕೆ ಉಪನ್ಯಾಸ ವೃಂದ ಜೊತೆ ನಿಂತಿದೆ. ನಮಗಾದ ಆನ್ಯಾಯದ ಬಗ್ಗೆ ಕೇಳಲು ಇಲ್ಲಿ ಯಾರು ಇಲ್ಲ. ಯಾವ ವಿದ್ಯಾರ್ಥಿ ಸಂಘಟನೆಯು, ಸಮುದಾಯ ಉಲಮಾ, ಉಮರ ನಾಯಕರು ಮುಂದೆ ಬರುತ್ತಿಲ್ಲ. ಕಾಲೇಜಿಗೆ ಯಾರು ಭೇಟಿ ನೀಡಿ ವಸ್ತುಸ್ಥಿತಿ ಅರಿಯುತ್ತಿಲ್ಲ.

ನಿಮ್ಮೊಂದಿಗೆ ಇದ್ದೇವೆ ಪರೀಕ್ಷೆ ಬರಿಯಿರಿ ಮುಂದೆ ಸರಿಯಾಗುತ್ತೆ ಎಂದ ನಾಯಕರು ಕಣ್ಮರೆಯಾಗಿದ್ದಾರೆ. ಆದ್ದರಿಂದ ನೂರಾರು ವಿದ್ಯಾರ್ಥಿನಿಯರು ಶಿಕ್ಷಣ ನಿಲ್ಲಿಸಲು ನಿರ್ಧರಿಸಿದ್ದೇವೆ. ನೆನಪಿಡಿ ನೀವು ಇಂದು ಬಾಯಿ ತೆರೆಯದೆ ಮುಚ್ಚಿದ್ದೀರಿ. ಇದು ಶಾಶ್ವತ ವಲ್ಲ. ದೇವರ ಮುಂದೆ ಇದಕ್ಕೆ ಉತ್ತರಿಸಲೇ ಬೇಕು.
-ನೊಂದ ವಿದ್ಯಾರ್ಥಿನಿ
ಪದವಿ ಕಾಲೇಜು ಉಪ್ಪಿನಂಗಡಿ

By dtv

Leave a Reply

Your email address will not be published. Required fields are marked *

error: Content is protected !!