ಮಂಗಳೂರು: ಬೀಬಿ ಆಶೂರ ಎಜುಕೇಶನ್ ಟ್ರಸ್ಟ್ ಇದರ ವತಿಯಿಂದ ವಿಶ್ವ ಪರಿಸರ ದಿನ ಕಾರ್ಯಕ್ರಮ ಪಾಂಡೇಶ್ವರ ಕ್ಯಾಂಪಸ್ ನಲ್ಲಿ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಂಸ್ಥಾಪಕರಾದಂತಹ ಅಬೂಬಕ್ಕರ್ ಸಿದ್ದೀಖ್ ಬೆಂಗರೆ, ಪ್ರಾಂಶುಪಾಲರಾದ ಉಸ್ತಾದ್ ಹನೀಫ್ ಸಖಾಫೀ ಪರಿಸರ ಸಂರಕ್ಷಣೆ ದೈನಂದಿನ ಚಟುವಟಿಕೆಯ ಭಾಗವಾಗಿ ಮಾರ್ಪಾಡಬೇಕೆಂದು ಭೂಲೋಕದ ಪ್ರತಿಯೊಬ್ಬ ಪ್ರಜೆಯು ಪರಿಸರ ಉಳಿಯುವಿಕೆಗೆ ಶ್ರಮಿಸಬೇಕೆಂದು ಉತ್ತಮ ಸಂದೇಶ ನೀಡಿದರು.
ಶರೀಅತ್ ಉಪನ್ಯಾಸಕಿಯರಾದ ಶಮೀನಾ ಹಾಗೂ ರಶೀನಾ ಮೇಡಂ, ಕಂಪೂಟರ್ ತರಬೇತಿ ನೀಡುವ ರೇಶ್ಮಾ ಮೇಡಂ, ಸೆಕ್ರೇಟರಿ ಶಂಶುದ್ದೀನ್ ಹಾಗೂ ವಿದ್ಯಾರ್ಥಿನಿಯರು ಸಂಪೂರ್ಣ ಸ್ವಚ್ಚತಾ ನಡೆಸಿ ಗಿಡ ನೆಟ್ಟು ಪರಿಸರದ ಕಾಳಜಿಯ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿ ಆಕ್ಸಸ್ ಇಂಡಿಯಾ ಅಶೋಶಿಯೇಟ್ ತರಬೇತುದಾರ ಇಬ್ರಾಹೀಂ ದುಬಾಲ್ -ಅಗ್ನಾಡಿ ಯವರು ಪರಿಸರದ ಸ್ವಚ್ಚತೆ ಸಸ್ಯ, ಮರ ಗಳ ಬಗ್ಗೆ ಇಸ್ಲಾಮಿನ ಕೊಡುಗೆ, ಕುರ್ಆನ್ ಹಾಗೂ ಹದೀಸ್ ಗಳಲ್ಲಿ ವಿವರಿಸಿದ ಹಾಗೂ ಪ್ರವಾದಿ(ಸ) ಯವರು ಮಾಡಿದ ಹಸಿರು ಕ್ರಾಂತಿಗೆ ಆದುನಿಕ ಜಗತ್ತೆ ನಾಚಿಕೆಪಡಬೇಕೆಂದು ಪ್ರಸಕ್ತ ಸನ್ನಿವೇಶದ ಬಗ್ಗೆ ದೀರ್ಘವಾಗಿ ವಿವರಿಸಿ ಮಕ್ಕಳನ್ನು ಹುರಿದುಂಬಿಸಿದರು.
ಒಟ್ಟು 36 ವಿದ್ಯಾರ್ಥಿನಿಯರು ಭಾಗವಹಿಸಿ ನಡೆಸಿದ ಈ ಕಾರ್ಯಕ್ರಮವನ್ನು ಊರ ನಾಗರಿಕರು ಪ್ರಶಂಸಿದರು.