ಪುತ್ತೂರು: ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮೂರು ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡ ಘಟನೆ ಪುತ್ತೂರು ಸಮೀಪದ ಮುಕ್ರಂಪಾಡಿ ತಿರುವಿನಲ್ಲಿ ನಡೆದಿದೆ.
ಮುಂಡೂರು ಮೊಟ್ಟೆತ್ತಡ್ಕ ಕಡೆಯಿಂದ ಬರುತ್ತಿದ್ದ ಕಾರು ಮುಕ್ರಂಪಾಡಿಯಲ್ಲಿ ಹೆದ್ದಾರಿಗೆ ಏಕಾಏಕಿ ಬಂದಿದ್ದು, ಕೂಡಲೇ ಪುತ್ತೂರಿನಿಂದ ಸಂಪ್ಯ ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಹಠಾತ್ ಬ್ರೇಕ್ ಹಾಕಿದೆ. ಆಗ ಹಿಂದಿನಿಂದ ಬಂದ ಮತ್ತೊಂದು ರಿಕ್ಷಾ ಮುಂದಿನ ಆಟೋ ರಿಕ್ಷಾ’ಗೆ ಡಿಕ್ಕಿಯಾಗಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಬೈಕ್’ಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್’ನಲ್ಲಿ ಸಂಚರಿಸುತ್ತಿದ್ದ ಮೂರು ವರ್ಷದ ಮಗು ಸೇರಿ ದಂಪತಿಗಳಿಗೆ ಗಾಯಗಳಾಗಿವೆ.
ಗಾಯಗೊಂಡವರನ್ನು ಮಾಡಾವು ಅರಿಕ್ಕಿಲ ನಿವಾಸಿ ಪ್ರಸ್ತುತ ಕುಂಬ್ರ ಶೇಖಮಲೆ ಮಸೀದಿ ಗುರುಗಳಾದ ಅಬ್ದುಲ್ ಖಬೀರ್ ಅಮಾನಿ(40) ಹಾಗೂ ಅವರ ಪತ್ನಿ ಮತ್ತು ಮೂರು ವರ್ಷದ ಮಗು ಎಂದು ತಿಳಿದು ಬಂದಿದೆ.
ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.