ತಂಪಾದ ಆಹಾರ ವಸ್ತುಗಳನ್ನು ತಿನ್ನಲು ಬೇಸಿಗೆ ಹೇಳಿ ಮಾಡಿಸಿದ ಕಾಲ. ಆದ್ದರಿಂದಲೇ ಐಸ್ ಕ್ರೀಮ್, ಕುಲ್ಫಿ ಇಂತಹ ವಸ್ತುಗಳಿಗೆ ಬೇಸಿಗೆಯಲ್ಲಿ ಡಿಮ್ಯಾಂಡ್ ಹೆಚ್ಚುವುದು. ಅದರಲ್ಲೂ ಕುಲ್ಫಿಯನ್ನು ಬೇಸಿಗೆಯಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ತಿನ್ನಲು ಇಷ್ಟಪಡುವ ಕುಲ್ಫಿ ಪ್ರಿಯರಿದ್ದಾರೆ. ಕುಲ್ಫಿ ತಿನ್ನುವ ಮಜವೇ ಅಂತದ್ದು. ನೀವು ಕುಲ್ಫಿ ಪ್ರಿಯರಾಗಿದ್ದರೆ ಈ ಕುಲ್ಫಿಯನ್ನು ನೀವು ಒಮ್ಮೆ ಸವಿಯಲೇ ಬೇಕು.
ಹೌದು. ಈ ಕುಲ್ಫಿ ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ನಾಲಗೆಯಲ್ಲಿ ನೀರೂರಿಸಿಕೊಂಡು ತಿನ್ನುವ ಹಂಬಲ ಹೆಚ್ಚಾಗುವುದು ಖಂಡಿತ. ಅದುವೇ ಬಾಂಬೇ ಕಫೂರ್ ಕುಲ್ಫಿ.
ಮಹಾರಾಷ್ಟ್ರದಾದ್ಯಂತ ಹೆಸರುವಾಸಿಯಾದ, ಕೆನೆ ಇರುವ ಮಂದವಾದ ಹಾಲಿನಿಂದ, ಕಪೂರ್ ಡೈರಿಯಲ್ಲಿ ತಯಾರಾಗುವ, ಸ್ವಾದಿಷ್ಟಕರವಾದ ಬಾಂಬೆ ಕಫೂರ್ ಕುಲ್ಫಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರದ ಜನಪ್ರಿಯ ಬೇಕರಿಯಲ್ಲಿ ಲಭ್ಯವಿದೆ. ಶುಚಿ-ರುಚಿಯಾದ, ಸ್ವಾದಿಷ್ಟ ಕುಲ್ಫಿಯನ್ನು ಸವಿಯಲು ಒಮ್ಮೆ ಇಲ್ಲಿಗೆ ಭೇಟಿಯಾಗಿ ನೋಡಿ. ಉತ್ತಮ ದರ್ಜೆಯ ಬದಾಮ್, ಪಿಸ್ತಾ, ಕಾಜೂ ಸೇರಿಸಿ ತಯಾರಿಸಲ್ಪಡುವ ಉತ್ಪನ್ನ ಇದಾಗಿರುತ್ತದೆ.
ಮಲಾಯಿ, ಪಿಸ್ತಾ, ಮ್ಯಾಂಗೋ, ಕೇಸರಿ ಪಿಸ್ತಾ, ಗುಲಾಬ್ ಬಾದಾಮ್, ಚಾಕಲೇಟ್, ಬ್ಲಾಕ್’ಕಾರೆಂಟ್, ಅಂಜೀರ್, ಪಿಸ್ತಾ ನಟ್ ಸೇರಿದಂತೆ ಸುಮಾರು 55ಕ್ಕೂ ಮಿಕ್ಕ ಕುಲ್ಫಿ ಫ್ಲೇವರ್’ಗಳು ಹಾಗೂ ಮಟ್ಕಾ, ಬಿಗ್ ಕ್ಯಾಂಡಿ ಇಲ್ಲಿ ಲಭ್ಯವಿದೆ.
ಕುಲ್ಫಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಪ್ರೀತಿ ಗಳಿಸಿದ ಶೀತಲ ತಿನಿಸಿದು. ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋದಾಗ ಹೊಸ ಬಗೆ-ಬಗೆಯ ವೆರೈಟಿ ನೋಡುತ್ತೇವೆ. ಕೆಲವೊಮ್ಮೆ ತಿಂದದ್ದೆ ತಿನ್ನವುದು ಏಕೆ ಎಂದು ಹೊಸ ರುಚಿಯ ಐಸ್ ಕ್ರೀಮ್ ಕೊಂಡು ಕೊಳ್ಳುತ್ತೇವೆ. ಆದ್ದರಿಂದ ಒಮ್ಮೆ ಈ ತಂಪಾದ ಸಿಹಿ ಕುಲ್ಫಿಯನ್ನು ನಿಮಗೆ ಸವಿಯಬಹುದು.
ಬಾಂಬೆ ಕಫೂರ್ ಕುಲ್ಫಿ ಒಂದು ಸಾಂಪ್ರದಾಯಿಕ ಭಾರತೀಯ ಐಸ್‌ಕ್ರೀಂ ಆಗಿದ್ದು ಶುದ್ದ ಹಾಗೂ ತಾಜಾ ಹಾಲನ್ನು ಬಳಸಿಕೊಂಡು ಇದನ್ನು ತಯಾರಿಸಲಾಗುತ್ತದೆ. ಕೇಸರಿ ಹಾಗೂ ಪಿಸ್ತಾಚಿಯೋಸ್ ನಂತಹ ಸಾಮಾಗ್ರಿಗಳೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ.
ಉಡುಪಿ, ಮಣಿಪಾಲ, ಮೂಡಬಿದ್ರೆ, ಭಟ್ಕಳ, ಮಂಗಳೂರು, ಮಡಿಕೇರಿ, ಬೆಂಗಳೂರು ಸೇರಿ ರಾಷ್ಟ್ರವ್ಯಾಪಿ ಲಭ್ಯವಿರುವ ಬಾಂಬೇ ಕಫೂರ್ ಕುಲ್ಫಿ ಇದೀಗ ಪುತ್ತೂರಿನ ಕುಂಬ್ರದಲ್ಲಿ ಸಿಗಲಿದೆ. ಇನ್ನು ಮಟ್ಕಾ ಮಲೈ ಕುಲ್ಫಿ ಮಕ್ಕಳು-ದೊಡ್ಡವರು ಎನ್ನದೆ ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ಆಗಿದೆ. ಮಟ್ಕಾ ದಲ್ಲಿ ತಯಾರಿಸಿ ಸಿಗುವಂತಹ ಈ ಐಸ್’ಕ್ರೀಮ್ ಸವಿಯುವುದೇ ಚಂದ.
ಐಸ್’ಕ್ರೀಮ್ ಅಥವಾ ಕುಲ್ಫಿ ಆರೋಗ್ಯಕರವೇ?:
ಹೌದು…ಬಾಂಬೆ ಕಫೂರ್ ಕುಲ್ಫಿ ಒಂದು ಡೈರಿ ಉತ್ಪನ್ನವಾದ್ದರಿಂದ ಇದರಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಇದನ್ನು ಸೇವಿಸುವ ಮೂಲಕ ನಿಮ್ಮ ದೇಹವು ಆರೋಗ್ಯಕರವಾಗುತ್ತದೆ. ಸಾಕಷ್ಟು ವಿಟಮಿನ್ಗಳು ಮತ್ತು ಪ್ರೋಟೀನ್ಗಳು ಸಹ ಇದರಲ್ಲಿ ಇವೆ.
ಹಾಲಿನಿಂದ ತಯಾರಿಸಿದ ಈ ಕುಲ್ಫಿ ಪ್ರೋಟೀನ್ನ ಉತ್ತಮ ಮೂಲವನ್ನು ಸಹ ಹೊಂದಿದೆ. ಮೂಳೆಗಳು, ನರಗಳು, ರಕ್ತ ಮತ್ತು ಚರ್ಮದಂತಹ ದೇಹದ ವಿವಿಧ ಭಾಗಗಳಿಗೆ ಪ್ರೋಟೀನ್ ಪ್ರಯೋಜನಕಾರಿಯಾಗಿದೆ. ಪ್ರೋಟೀನ್ ಸೇವನೆ ಮೂಲಕ, ಅಂಗಾಂಶ ಮತ್ತು ಸ್ನಾಯುಗಳು ಬಲವಾಗುವುದು. ಉಗುರುಗಳು ಮತ್ತು ಕೂದಲಿನಂತಹ ದೇಹದ ಕೆಲವು ಭಾಗಗಳಿಗೂ ಸಹ ಪ್ರೋಟೀನ್ ಅಗತ್ಯವಿದೆ. ಐಸ್ ಕ್ರೀಂ, ಕಫೂರ್ ಕುಲ್ಫಿ ತಿನ್ನುವ ಮೂಲಕ ದೇಹವು ಪ್ರೋಟೀನ್ ಪಡೆಯುತ್ತದೆ.ಜೊತೆಗೆ ಇದು(PURE VEG) ಶುದ್ದ ಸಸ್ಯಹಾರಿಯಾಗಿರುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ಐಸ್ ಕ್ರೀಂ ನಲ್ಲಿ ವಿಟಮಿನ್ A, B-2 ಮತ್ತು B-12 ಕಂಡುಬಂದಿದೆ. ವಿಟಮಿನ್ ಎ ನಿಮ್ಮ ಚರ್ಮ, ಮೂಳೆಗಳು ಮತ್ತು ರೋಗ ನಿರೋಧಕಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ಉತ್ತಮ ದೃಷ್ಟಿ ನೀಡುತ್ತದೆ. ವಿಟಮಿನ್ ಬಿ -2 ಮತ್ತು ಬಿ -12 ಸಮತೋಲನ ಚಯಾಪಚಯ ಮತ್ತು ಬಿ -12 ತೂಕ ನಷ್ಟದಲ್ಲಿ ಸಹಾಯಕವಾಗಿವೆ. ನಿಮಗೆ ಹಾಲು ಕುಡಿಯಲು ತೊಂದರೆ ಇದ್ದಲ್ಲಿ ನೀವು ಕುಲ್ಫಿಯನ್ನು ತಿನ್ನಬಹುದು. ಇದರಿಂದ ನೀವು ವಿಟಮಿನ್ ಕೊರತೆಯನ್ನು ಸರಿದೂಗಿಸಬಹುದು.
ಇದನ್ನು ಸವಿಯಲು ಪುತ್ತೂರಿನ ಕುಂಬ್ರದಲ್ಲಿರುವ ಜನಪ್ರಿಯ ಬೇಕರಿ’ ಭೇಟಿಯಾಗಿ. ಸಣ್ಣ ಕುಲ್ಫಿ 30ರೂ, ನಾರ್ಮಲ್ ಕುಲ್ಫಿ 40ರೂ ಹಾಗೂ ಮಟ್ಕಾ ಕುಲ್ಫಿ 50ರೂ ಗೆ ಇಲ್ಲಿ ಲಭ್ಯವಿದೆ.